ಕರ್ನಾಟಕ

karnataka

By

Published : Dec 14, 2019, 7:29 PM IST

ETV Bharat / state

ತುಂಗಾಭದ್ರಾ ತಟದಲ್ಲಿ ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

ಪಿಂಡ ಪ್ರಧಾನ ಮೂಢನಂಬಿಕೆ ಎಂದು ಬೆಳಗಾವಿಯಲ್ಲಿ ಯುವಕರ ಗುಂಪೊಂದು ಸಮಾಧಿಯಲ್ಲಿ ಕಾಗೆ ತಿನ್ನಲು ಇಟ್ಟ ಪಿಂಡವನ್ನು ತಾವು ತಿಂದರೆ, ಇತ್ತ ಬಳ್ಳಾರಿಯಲ್ಲಿ ಭಾರತೀಯ ಸಂಪ್ರದಾಯಕ್ಕೆ ಮಾರುಹೋದ ವಿದೇಶಿ ಮಹಿಳೆಯೊಬ್ಬಳು ತನ್ನ ಪೋಷಕರಿಗೆ ಪಿಂಡ ಪ್ರಧಾನ ಮಾಡಿದ್ದಾಳೆ.

ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ, Foriegn lady did last rights of her mother
ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ ಹಿಂಭಾಗ ಹರಿಯುತ್ತಿರುವ ತುಂಗಭದ್ರಾ ನದಿ ತಟದಲ್ಲಿಂದು ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯೋರ್ವಳು ಪಿತೃತರ್ಪಣ ನೆರವೇರಿಸಿ ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿದಿದ್ದಾರೆ.

ತಾಯಿಗೆ ಪಿಂಡ ಪ್ರಧಾನ ಮಾಡಿದ ವಿದೇಶಿ ಮಹಿಳೆ

ದಕ್ಷಿಣ ಆಫ್ರಿಕಾ ಮೂಲದ ಮಹಿಳೆಯ ತಾಯಿ ಖಾಲಿಯಾ ಅವರು ಇತ್ತೀಚೆಗೆ‌ ಮೃತಪಟ್ಟಿದ್ದರು. ಆದರೆ‌ ತಾಯಿಯ ಅಂತ್ಯಕ್ರಿಯೆಗೆ ಹೋಗಲು ಆ ಮಹಿಳೆಗೆ ಸಾಧ್ಯವಾಗಿರಲಿಲ್ಲ.‌ ಹೀಗಾಗಿ, ತಾಯಿಯ ಆತ್ಮಕ್ಕೆ ಶಾಂತಿಕೋರಿ ಭಾರತೀಯ ಸಂಪ್ರದಾಯದಂತೆಯೇ ಆಕೆ ಪಿತೃತರ್ಪಣ ಮಾಡಿದ್ದಾರೆ.

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು!

ಮೋಹನ‌ ಚಿಕ್ಕಭಟ್ ಜೋಷಿ ಎಂಬುವರು ಈ‌ ಪಿತೃತರ್ಪಣ ಕಾರ್ಯ ನೆರವೇರಿಸಿಕೊಟ್ಟರು.‌ ಬಳಿಕ ಮಾತನಾಡಿದ ಆ ಮಹಿಳೆ ದಕ್ಷಿಣ ಆಫ್ರಿಕಾದಲ್ಲಿ ತಾಯಿ ಕಾಲಿಯಾ ಮೃತಪಟ್ಟಿದ್ದರು. ಆದರೆ ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಐತಿಹಾಸಿಕ‌‌ ಪ್ರಸಿದ್ಧ ಹಂಪಿಯಲ್ಲಿ ಶ್ರಾದ್ಧಕರ್ಮಗಳನ್ನು ಮಾಡಲಾಯಿತೆಂದರು.

For All Latest Updates

ABOUT THE AUTHOR

...view details