ಬಳ್ಳಾರಿ: ಸಾವಿನ ದವಡೆಯಲ್ಲಿದ್ದ ಮಗನನ್ನು ಪಾರು ಮಾಡಿ ತಂದೆಯೇ ಮೃತ ಪಟ್ಟ ಘಟನೆ ಕುರುಗೋಡು ತಾಲೂಕಿನ ಸಿದ್ದಮನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಾವಿನ ದವಡೆಯಿಂದ ಮಗನನ್ನು ಪಾರು ಮಾಡಿ ಮೃತ ಪಟ್ಟ ತಂದೆ - ನೀರಿನ ರಭಸಕ್ಕೆ ಕೊಚ್ಚಿಹೋದ ತಂದೆ
ಕುರುಗೋಡು ತಾಲೂಕಿನ ಸಿದ್ದಮನಹಳ್ಳಿ ಗ್ರಾಮದ ಕಾಲುವೆಯಲ್ಲಿ ಮಗನನ್ನು ಪಾರು ಮಾಡಿ ತಂದೆ ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ನಡೆದಿದೆ.
died
ಖಾದರ ಬಾಷಾ(34) ಮೃತ ದುರ್ದೈವಿ. ಚಿಕನ್ ಅಂಗಡಿ ವ್ಯಾಪಾರಿಯಾಗಿದ್ದ ಈತ, ಮಗ ಮುಬಾರಕ್(13) ಕರೆದುಕೊಂಡು ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿದ್ದ. ಈ ವೇಳೆ ನೀರಿನ ರಭಸಕ್ಕೆ ಮಗ ಕೊಚ್ಚಿ ಹೋಗಿದ್ದಾನೆ. ತಕ್ಷಣವೇ ಖಾದರ ಬಾಷಾ ಈಜಿ ಮಗನನ್ನು ದಡ ಸೇರಿಸಿದ್ದಾನೆ. ಆದರೆ, ಮತ್ತೆ ಏಕಾಏಕಿ ಬಂದ ನೀರಿನ ರಭಸಕ್ಕೆ ತಂದೆ ಕೊಚ್ಚಿ ಹೋಗಿದ್ದಾರೆ. ಮಂಗಳವಾರ ಬಳ್ಳಾರಿಯ ವಿನಾಯಕ ನಗರದ ಬಳಿ ಅವರ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.