ಕರ್ನಾಟಕ

karnataka

ETV Bharat / state

ಗಣಿಜಿಲ್ಲೆಯ ಕೃಷಿಕನ ಮಗ ಐಐಟಿಗೆ ಆಯ್ಕೆ : ಕಠಿಣ ಸಾಧನೆಗೆ ಸಿಕ್ಕ ಜಯ - ಬಳ್ಳಾರಿ ಸುದ್ದಿ

ರೈತರ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೃಷಿ ಕೂಲಿ ಕಾರ್ಮಿಕರಾಗಿ ಕಾಯಕ ಮಾಡುತ್ತಿರುವ ಕೂಡ್ಲಿಗಿ ಪಟ್ಟಣದ ದಂಪತಿ ಪುತ್ರ ಗೋವಿಂದ ಎಂಬುವರು ಪ್ರತಿಷ್ಠಿತ ವಾರಾಣಸಿ ಭಾರತೀಯ ತಂತ್ರ ಜ್ಞಾನ ಸಂಸ್ಥೆಗೆ (ಐಐಟಿ) ಆಯ್ಕೆಯಾಗಿದ್ದಾನೆ.

Breaking News

By

Published : Nov 2, 2020, 6:52 PM IST

ಬಳ್ಳಾರಿ: ಗಣಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಕೃಷಿಕನ ಮಗನೊಬ್ಬ ಐಐಟಿಗೆ ಆಯ್ಕೆಯಾಗಿ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೃಷಿ ಕೂಲಿ ಕಾರ್ಮಿಕರಾಗಿ ಕಾಯಕ ಮಾಡುತ್ತಿರುವ ಕೂಡ್ಲಿಗಿ ಪಟ್ಟಣದ ಕಾಲ್ಚೆಟ್ಟಿ ರಮೇಶ ಮತ್ತು ನಾಗರತ್ನ ಎಂಬ ದಂಪತಿಗಳ ಎರಡನೇಯ ಪುತ್ರ ಗೋವಿಂದ ಪ್ರತಿಷ್ಠಿತ ವಾರಾಣಸಿ ಭಾರತೀಯ ತಂತ್ರ ಜ್ಞಾನ ಸಂಸ್ಥೆಗೆ (ಐಐಟಿ) ಆಯ್ಕೆಯಾಗಿದ್ದಾನೆ.

ನಮ್ದು ಕೃಷಿ ಕುಟುಂಬ. ತಂದೆ- ತಾಯಿ ಅನಕ್ಷಸ್ಥರು, ಜಮೀನಿನಲ್ಲಿ ಕೆಲಸ ಮಾಡಿದರೆ ಮಾತ್ರ ಜೀವನ. ಆದರೂ ಮಕ್ಕಳು ಚೆನ್ನಾಗಿ ಓದಿ, ದೊಡ್ಡ ವ್ಯಕ್ತಿಗಳಾಗಬೇಕು ಎಂಬ ಆಸೆ. ಅವರ ಅಸೆಯೇ ನಾನು ಓದಲು ಪ್ರೇರಣೆಯಾಯಿತು ಎನ್ನುತ್ತಾರೆ ಗೋವಿಂದ.

ಇದಲ್ಲದೆ, ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಪರಿಶಿಷ್ಟ ಪಂಗಡ ಕೋಟಾದ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ 611ನೇ ರ್ಯಂಕ್ ಪಡೆದು ದೇಶ ಅತ್ಯುತ್ತಮ ತಂತ್ರಜ್ಞಾನ ಸಂಸ್ಥೆಗಳಲ್ಲೊಂದಾದ ವಾರಾಣಸಿ ಐಐಟಿಯಲ್ಲಿ ಪ್ರವೇಶ ಪಡೆದು ಸಿರಮಿಕ್ ಎಂಜಿನಿಯರಿಂಗ್ ಪದವಿ ಆಯ್ಕೆ ಮಾಡಿ ಕೊಂಡಿದ್ದಾರೆ. ಕರ್ನಾಟಕ ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿ, ಐಐಟಿಯಲ್ಲಿ ಪ್ರವೇಶ ಪಡೆದ ಮೊದಲಿಗೆ ಎಂಬ ಹೆಗ್ಗಳಿಕೆಯೂ ಗೋವಿಂದ್‍ ಅವರಿಗೆ ಸಲ್ಲುತ್ತದೆ. ಐಐಟಿಯಲ್ಲಿ ಪ್ರವೇಶ ಪಡೆಯಬೇಕು ಎಂಬ ಛಲ ದಿಂದ ಯಾವುದೇ ಕೋಚಿಂಗ್ ಇಲ್ಲದೆ ಪ್ರತಿ ದಿನ 4ರಿಂದ 5 ತಾಸು ಮನೆಯಲ್ಲೇ ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನದೊಂದಿಗೆ ಕೆಲವೊಂದು ವಿಷಯಗಳನ್ನು ಮೊಬೈಲ್‍ನಲ್ಲೇ ನೋಡಿಕೊಂಡು ನೋಟ್ ಮಾಡಿಕೊಳ್ಳುತ್ತಿದ್ದೆ. ಇದರಿಂದ ಜೆಇಇ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು ಎನ್ನುತ್ತಾರೆ ಗೋವಿಂದ.

ಓದಲು ಬರೆಯಲು ಬಾರದ ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿದ್ದೇವೆ. ನಮ್ಮ ಪ್ರಯತ್ನಕ್ಕೆ ತಕ್ಕಂತೆ ನಮ್ಮ ಮಗ ಓದುತ್ತಿದ್ದಾನೆ. ಅದೆ ನಮಗೆ ತೃಪ್ತಿ ತಂದಿದೆ ಎಂದು ಗೋವಿಂದನ ತಂದೆ ರಮೇಶ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details