ಕರ್ನಾಟಕ

karnataka

ETV Bharat / state

ಮನೋವಂತಿಕೆ ಇರುವ ಜನರಿಂದ ಮಾತ್ರ ವೈಜ್ಞಾನಿಕ ಜಾಗೃತಿ ಮೂಡಿಸಲು ಸಾಧ್ಯ : ಡಾ.ಹುಲಿಕಲ್ ನಟರಾಜ್ - ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ

ಬಳ್ಳಾರಿ ನಗರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಸ್ಥಾಪನೆ ಜೊತೆಗೆ ಜನರಲ್ಲಿ ವೈಜ್ಞಾನಿಕವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ವೈಜ್ಞಾನಿಕ ಚಿಂತಕರಾದ ಡಾ.ಹುಲಿಕಲ್ ನಟರಾಜ್ ಭಾಗವಹಿಸಿದ್ದರು.

ವೈಜ್ಞಾನಿಕ ಚಿಂತಕ ಡಾ.ಹುಲಿಕಲ್ ನಟರಾಜ್
Dr. Hulikal Nataraj

By

Published : Apr 3, 2021, 7:07 AM IST

ಬಳ್ಳಾರಿ:ಗಟ್ಟಿತನದ ಮನಸ್ಸು, ಮನೋವಂತಿಕೆ ಇರುವ ಜನರಿಂದ ಮಾತ್ರ ವೈಜ್ಞಾನಿಕ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ವೈಜ್ಞಾನಿಕ ಚಿಂತಕರಾದ ಡಾ.ಹುಲಿಕಲ್ ನಟರಾಜ್ ತಿಳಿಸಿದರು.

ವೈಜ್ಞಾನಿಕ ಚಿಂತಕರಾದ ಡಾ.ಹುಲಿಕಲ್ ನಟರಾಜ್

ಇಲ್ಲಿನ ಬಸವೇಶ್ವರ ನಗರದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಸ್ಥಾಪನೆ ಜೊತೆಗೆ ಜನರಲ್ಲಿ ವೈಜ್ಞಾನಿಕವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ವೈಜ್ಞಾನಿಕ ಚಿಂತಕರಾದ ಡಾ.ಹುಲಿಕಲ್ ನಟರಾಜ್ ಭಾಗವಹಿಸಿ ಸಾರ್ವಜನಿಕರಿಗೆ ವಿವಿಧ ಪವಾಡದ ನೈಜ ರೂಪವನ್ನು ಬಯಲು ಮಾಡಿದರು.

ಪವಾಡದ ನೈಜ ರೂಪವನ್ನು ಬಯಲು ಮಾಡಿದ ನಟರಾಜ್​

ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಲ್ಲಿ ಇದುವರೆಗೂ 32 ಸಾವಿರ ಬುದ್ಧಿಬಜೀವಿಗಳು, ಸಂಶೋಧಕರು, ಸೃಜನಾತ್ಮಕ ವ್ಯಕ್ತಿಗಳು, ಉಪನ್ಯಾಸಕರು ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶವನ್ನು ಪರಿಷತ್ತು ಹೊಂದಿದೆ. ವೈಜ್ಞಾನಿಕ ಲೇಖನಗಳ ಬಗ್ಗೆ ಜಾಗೃತಿ, ಪ್ರಜ್ಞಾವಂತಿಕೆ ಇರುವರಿಗೆ ಮಾತ್ರ ಸದಸ್ಯತ್ವ ನೀಡಲಾಗಿದೆ ಎಂದರು.

ಪವಾಡದ ನೈಜ ರೂಪವನ್ನು ಬಯಲು ಮಾಡಿದ ನಟರಾಜ್​

ವೈಜ್ಞಾನಿಕ, ಪರಿಸರ, ನೀರು, ಭೂಮಿ, ಚಾರಿತ್ರಿಕ ಹಿನ್ನೆಲೆ ಇರುವ ಲೇಖನಗಳು ಇದ್ದರೆ ಕಳಿಸಬಹುದು. ಜೂ.5 ರಂದು 100 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ಲೇಖಕರಿಗೆ 100 ಪುಸ್ತಕಗಳನ್ನು ನೀಡಲಾಗುತ್ತದೆ. ಪುಸ್ತಕವನ್ನು ಉಚಿತವಾಗಿ ಪ್ರಕಟ ಮಾಡಲಾಗುತ್ತದೆ. ಇದುವರೆಗೂ 10 ಸಾವಿರಕ್ಕಿಂತ ಹೆಚ್ಚು ವೈಜ್ಞಾನಿಕ ಬಗ್ಗೆ ಜಾಗೃತಿ ಕಾರ್ಯಕ್ರಮಗಳ ನಡೆಸಿದ್ದಾರೆ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಹವಿನಾಳ ಬಸವರಾಜ್, ಜಿಲ್ಲಾ ಘಟಕ ಅಧ್ಯಕ್ಷ ಚನ್ನಬಸವಸ್ವಾಮಿ, ರಾಜ್ಯ ಸಮಿತಿಯ ಸದಸ್ಯರಾದ ಗೀತಾ ವಿ.ಶಾಂತ ಕುಮಾರ್ ಮತ್ತು ಇನ್ನಿತರರು ಹಾಜರಿದ್ದರು.

ABOUT THE AUTHOR

...view details