ಕರ್ನಾಟಕ

karnataka

ETV Bharat / state

ಮದುವೆಗೆ ಅನುಮತಿ ನೀಡದ ಬಳ್ಳಾರಿ ಜಿಲ್ಲಾಧಿಕಾರಿ ವಿರುದ್ಧ ಮೊಕದ್ದಮೆ ಹೂಡಲು ಮುಂದಾದ ವಕೀಲ..

ನಿವೇನಾದ್ರೂ ಮನೆಯಲ್ಲಿ ಮದುವೆ ಮಾಡಿದ್ರೇ ಮನೆಯಲ್ಲಿರುವವರನ್ನು ಬಂಧಿಸಿ, ಕೇಸ್ ದಾಖಲು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ. ಹಾಗಾಗಿ ಡಿಸಿ ವಿರುದ್ಧವೇ ಕೋರ್ಟ್‌ನಲ್ಲಿ ಕೇಸ್ ಹಾಕಲು ಜೆ.ರಾಮಣ್ಣ ಎಂಬ ವಕೀಲರು ಮುಂದಾಗಿದ್ದಾರೆ.

Rajanna
ರಾಜಣ್ಣ

By

Published : Apr 13, 2020, 5:56 PM IST

ಬಳ್ಳಾರಿ :ಮನೆಯಲ್ಲಿಯೇ ಮಗನ ಮದುವೆ ಮಾಡುತ್ತೇವೆಂದರೂ ಅನುಮತಿ ನೀಡದ ಜಿಲ್ಲಾಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಲು ಬಳ್ಳಾರಿಯ ವಕೀಲರೊಬ್ಬರು ಮುಂದಾಗಿದ್ದಾರೆ. ಜೆ ರಾಮಣ್ಣ ಎಂಬ ವಕೀಲರು ಡಿಸಿ ವಿರುದ್ಧ ಕೇಸ್ ಹಾಕುವುದಾಗಿ ಹೇಳಿದ್ದಾರೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಏಪ್ರಿಲ್ 20ರಂದು ತಮ್ಮ 2ನೇ ಮಗನ ಮದುವೆ ಮಾಡಲು ಮುಂಚೆಯೇ ಹಿರಿಯರು ತೀರ್ಮಾನಿಸಿದ್ದೆವು. ಆದರೆ, ಲಾಕ್‌ಡೌನ್​ನಿಂದಾಗಿ ನಾವೀಗ ಮನೆಯಲ್ಲಿಯೇ ಮದುವೆ ಮಾಡಲು ನಿರ್ಧರಿಸಿದ್ದರೂ ಜಿಲ್ಲಾಧಿಕಾರಿಗಳು ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.

ಮದುವೆಗೆ ಅನುಮತಿ ನೀಡದ ಡಿಸಿ ವಿರುದ್ಧ ಮೊಕದ್ದಮೆ ಹೂಡಲು ವಕೀಲರ ಸಿದ್ಧತೆ..

ಇಂದು ಜಿಲ್ಲಾಧಿಕಾರಿ ಅವರಿಗೆ ನನ್ನ ಮಗನ ಮದುವೆಯನ್ನು ಹುಡುಗಿಯ ಮನೆಯಲ್ಲಿಯೇ ಮಾಡಿಕೊಳ್ಳುತ್ತೇವೆ ಎಂದು ಪತ್ರದ ಮೂಲಕ ಮನವಿ ಮಾಡಿಕೊಳ್ಳಲು ಬಂದರೆ ಅವರು ಪತ್ರವನ್ನು ಸಹ ಸ್ವೀಕರಿಸುತ್ತಿಲ್ಲ. ಹಾಗೇ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಹೇಳುತ್ತಾರೆ. ಲಾಕ್‌ಡೌನ್ ನಿಯಮದ ಪ್ರಕಾರ ನಾಲ್ಕರಿಂದ ಐದು ಜನ ಸೇರಿ ಮದುವೆ ಮಾಡಿಕೊಳ್ಳುತ್ತೇವೆ ಅಂದ್ರೂ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ನಮಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ ಎಂದರು.

ಇದೇ ಏಪ್ರಿಲ್​ 20ರಂದು ಕಂಪ್ಲಿಯ ಮುದ್ದಾಪುರ ಗ್ರಾಮದಲ್ಲಿ ಹುಡುಗಿಯ ಮನೆಯಲ್ಲೇ ಮದುವೆ ಇದೆ. ಆದ್ದರಿಂದ ನಮಗೆ ತೊಂದರಯಾಗಬಾರದು ಎಂದು ಜಿಲ್ಲಾಧಿಕಾರಿ ಹತ್ತಿರ ಬಂದಿದ್ದೇವೆ. ಆದರೆ, ಜಿಲ್ಲಾಧಿಕಾರಿಗಳು ನಿವೇನಾದ್ರೂ ಮನೆಯಲ್ಲಿ ಮದುವೆ ಮಾಡಿದ್ರೇ ಮನೆಯಲ್ಲಿರುವವರನ್ನು ಬಂಧಿಸಿ, ಕೇಸ್ ದಾಖಲು ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಜೆ.ರಾಮಣ್ಣ ನೋವು ತೋಡಿಕೊಂಡರು.

ಅವರು ಈ ರೀತಿ ಮಾಡುವುದರಿಂದ ನಮಗೆ ತೊಂದರೆಯಾಗಿದೆ. ನಮ್ಮ ಮಕ್ಕಳು ಉದ್ಯೋಗಿಗಳಾಗಿದ್ದು, ಬೆಂಗಳೂರಿನಿಂದ ಬಂದಿದ್ದಾರೆ. ಮದುವೆಗೆ ಅನುಮತಿ ನೀಡದೆ ಅನಾನುಕೂಲ ಮಾಡಿದ್ದರಿಂದ, ಅದಕ್ಕಾಗಿ ಖರ್ಚು ಮಾಡಿದ ಹಣ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳ ಮೇಲೆ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದರು.

ABOUT THE AUTHOR

...view details