ಬಳ್ಳಾರಿ: ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಶಾಸಕ ಗಣೇಶ ಅವರು ಕೆಳಸೇತುವೆ ಜಲಾವೃತಗೊಂಡ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಗಣೇಶ ಕೇಳಿಲ್ಲಿ, ಹಂತ ಹಂತವಾಗಿ ಚರ್ಚೆ ಮಾಡುತ್ತಾ ಹೋಗೋಣ, ಇದು ಚರ್ಚೆಯಾಗಬಾರದು ಪರಿಹಾರ ಆಗಬೇಕೆಂದಾಗ, ಶಾಸಕ ಗಣೇಶ ಅವರು ಏರು ಧ್ವನಿಯಲ್ಲೇ ಮಾತನಾಡಿದರು.
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದು ಈ ಪ್ರಸಂಗ ನಡೆಯಿತು.
ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗೋದಾದ್ರೆ ಹೋಗಿ, ನನಗೆ ಅಭ್ಯಂತರವಿಲ್ಲ:ವಿಪರೀತ ಸುರಿದ ಮಹಾಮಳೆಗೆ ಕೆಳಸೇತುವೆ ಜಲಾವೃತಗೊಂಡು ಮಕ್ಕಳು ಶಾಲೆಗೆ ಹೋಗಲು ಹರಸಾಹಸಪಡುತ್ತಾರೆಂದಾಗ, ಮಧ್ಯೆಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿ, ಗಣೇಶ ಎಂದೇ ಸಂಬೋಧಿಸಿ ವಿಷಯಾಂತರ ಬೇಡ. ಒಂದೊಂದೇ ಚರ್ಚಿಸುತ್ತಾ ಹೋಗೋಣ ಎಂದಾಗ, ಗಣೇಶ ಅವ್ರು ಏರು ಧ್ವನಿಯಲ್ಲೇ ಮಾರುತ್ತರ ನೀಡಿದರು.
ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗೋಗಾದ್ರೆ ಹೋಗಬಹುದು. ನನಗೇನು ಅಭ್ಯಂತರವಿಲ್ಲ. ಆದರೆ, ಇಲ್ಲಿ ಬರೀ ಮಾತೇ ಆಗಬಾರದು. ಅದು ತಾರ್ಕಿಕ ಅಂತ್ಯ ತಲುಪಬೇಕು. ಶಾಶ್ವತ ಪರಿಹಾರಕ್ಕೆ ಏನೇನು ಮಾಡಬೇಕೆಂಬುದನ್ನು ಚರ್ಚಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಶಾಸಕರಾದ ಜೆ.ಎನ್.ಗಣೇಶ, ಬಿ.ನಾಗೇಂದ್ರ, ಈ.ತುಕಾರಾಂ, ಜಿ.ಸೋಮಶೇಖರರೆಡ್ಡಿ, ಜಿ.ಕರುಣಾಕರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ ಅವರು ಒಂದೇ ಸಾಲಿನಲ್ಲಿ ಕುಳಿತುಕೊಂಡು ಅಚ್ಚರಿ ಮೂಡಿಸಿದರು. ಸಂಸದರಾದ ವೈ. ದೇವೇಂದ್ರಪ್ಪ, ಕರಡಿ ಸಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಸಿಇಒ ಕೆ.ನಿತೀಶ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸೇರಿದಂತೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.