ಕರ್ನಾಟಕ

karnataka

ETV Bharat / state

ಸಾವರ್ಕರ್​ ಹಾಗೂ ಸಿದ್ಧಗಂಗಾ ಸ್ವಾಮೀಜಿಗೂ ಭಾರತ ರತ್ನ ನೀಡಬೇಕು: ಡಿಸಿಎಂ ಸವದಿ - latest ballary news

ವೀರ ಸಾವರ್ಕರ್​ ಹಾಗೂ ಸಿದ್ಧಗಂಗಾ ಸ್ವಾಮೀಜಿಗೂ ಭಾರತ ರತ್ನ ನೀಡಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾರ್ವಕರ್ ಹಾಗೂ ಸಿದ್ಧಗಂಗಾ ಸ್ವಾಮೀಜಿಗೂ ಭಾರತ ರತ್ನ ನೀಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ

By

Published : Oct 22, 2019, 1:37 PM IST

ಬಳ್ಳಾರಿ:ವೀರ ಸಾವರ್ಕರ್​ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರಿಗೆ ಮತ್ತು ಈ ನಾಡಿನ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಲಿಂಗೈಕ್ಯ ಸಿದ್ಧಗಂಗಾ ಸ್ವಾಮೀಜಿಗೂ ಭಾರತ ರತ್ನ ನೀಡಬೇಕೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾವರ್ಕರ್​ ಹಾಗೂ ಸಿದ್ಧಗಂಗಾ ಸ್ವಾಮೀಜಿಗೂ ಭಾರತ ರತ್ನ ನೀಡಬೇಕೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ

ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿಂದು ಎಸ್ಸಿ, ಎಸ್ಪಿ ಸಮುದಾಯದ ಮೆಟ್ರಿಕ್ ನಂತರದ ವಸತಿ ನಿಲಯ ಉದ್ಟಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾವರ್ಕರ್​ಗೆ ಭಾರತ ರತ್ನ ನೀಡಬೇಕೆಂಬ ಒತ್ತಾಯವಿದೆ. ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ನೀಡಬೇಕೆಂದು ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದರು.

ಹಂಪಿ ಉತ್ಸವ ಆಚರಣೆ: ಉಪಚುನಾವಣೆ ನಿಮಿತ್ತ ಚುನಾವಣಾ ನೀತಿ ಸಂಹಿತೆ ಎದುರಾಗುವ ಸಾಧ್ಯತೆ ಇರೋದರಿಂದ ಜನವರಿ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆಗೆ ಕೆಡಿಪಿ ಸಭೆಯಲ್ಲಿ ದಿನಾಂಕ ಪ್ರಕಟಿಸಲಾಗುವುದು. ಮುಂದಿನ ವರ್ಷದಿಂದ ನವೆಂಬರ್ ತಿಂಗಳಲ್ಲೇ ಹಂಪಿ ಉತ್ಸವ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ವೇಳೆ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಜಿ.ಕರುಣಾಕರರೆಡ್ಡಿ, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ ಉಪಸ್ಥಿತರಿದ್ದರು.

ABOUT THE AUTHOR

...view details