ಬಳ್ಳಾರಿ: ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಇತಿಹಾಸ ಕಳೆಯುತ್ತಿದ್ದಾರೆ. ಜಿಲ್ಲೆಯ ವಿಭಜನೆ ಬೇಡ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸಿ ಎಂದು ಅಖಿಲ ಭಾರತ ಜನಗಣ ಒಕ್ಕೂಟದ ಅಧ್ಯಕ್ಷ ಗಂಗಿರೆಡ್ಡಿ ಹೇಳಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸಿ: ಗಂಗಿರೆಡ್ಡಿ
ಬಳ್ಳಾರಿ ಜಿಲ್ಲೆಯ ವಿಭಜನೆ ಬೇಡ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸಿ ಎಂದು ಅಖಿಲ ಭಾರತ ಜನಗಣ ಒಕ್ಕೂಟದ ಅಧ್ಯಕ್ಷ ಗಂಗಿರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಗಂಗಿರೆಡ್ಡಿ ಅವರು ಜಿಲ್ಲಾ ವಿಭಜನೆಗೆ ಎಲ್ಲಾ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಸೇರಿ ಚರ್ಚಿಸಿದ ನಂತರ ನಿಯೋಗ ಮುಖ್ಯಮಂತ್ರಿಗಳ ಬಳಿ ಹೋಗಬೇಕಿತ್ತು ಎಂದರು.
ಮುಖ್ಯಮಂತ್ರಿಗಳು ಸಹ ಜನಾಭಿಪ್ರಾಯವಿಲ್ಲದೇ ಸಂಪುಟ ಚರ್ಚೆಗೆ ವಹಿಸಬಾರದಿತ್ತು, ಇದು ಕೆಲವೊಬ್ಬರ ಸ್ವಾರ್ಥಕ್ಕಾಗಿ ಮಾಡುತ್ತಿರುವ ಹುನ್ನಾರ. ವಿಭಜನೆ ಆದರೆ ಬಳ್ಳಾರಿಗೆ ಸಂಪತ್ತು ಇಲ್ಲದಾಗುತ್ತದೆ. ಜಿಲ್ಲೆಯ ಐತಿಹಾಸಿಕ ಪರಂಪರೆಗೆ ಪೆಟ್ಟು ಬೀಳಲಿದೆ. ಸ್ವಾಮೀಜಿ ಈ ಭಾಗದ 13 ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆ ಹೋರಾಟಕ್ಕೆ ಧುಮುಕಿ, ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗಿದೆಯೆಂದರು.