ಕರ್ನಾಟಕ

karnataka

By

Published : Mar 4, 2020, 8:13 PM IST

ETV Bharat / state

ಕೊರೊನಾ ಭೀತಿ: ಹೊಸಪೇಟೆ ಸಾರಿಗೆ ನಿಗದಮಲ್ಲಿ ಸಿಬ್ಬಂದಿಗೆ ಮಾಸ್ಕ್​ ವಿತರಣೆ

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಹೊಸಪೇಟೆ ವಿಭಾಗದ ಕೆಎಸ್ಆರ್​ಟಿಸಿ ಸಾರಿಗೆ ನಿಗದಮಲ್ಲಿ ಕೊರೊನಾ ವೈರಸ್ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಲಾಯಿತು.

Mask Distribution in hospete
ಹೊಸಪೇಟೆ ಸಾರಿಗೆ ನಿಗದಮಲ್ಲಿ ಮಾಸ್ಕ್​ ವಿತರಣೆ

ಹೊಸಪೇಟೆ: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಹೊಸಪೇಟೆ ವಿಭಾಗದ ಕೆಎಸ್ಆರ್​ಟಿಸಿ ಸಾರಿಗೆ ನಿಗದಮಲ್ಲಿ ಕೊರೊನಾ ವೈರಸ್ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಲಾಯಿತು.

ಸಾರಿಗೆ ನಿಗಮದ ನೌಕರರಿಗೆ ಮಾಸ್ಕ್​​ ನೀಡಿ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗೀಯ ನಿಯಂತ್ರಣ ಅಧಿಕಾರಿ ಜಿ.ಶೀನಯ್ಯ ಮಾತನಾಡಿದರು. ಪ್ರಯಾಣಿಕರಿಗೆ ಕೊರೊನಾ ವೈರಸ್ ಕುರಿತು ಸಾರಿಗೆ ಸಿಬ್ಬಂದಿ ಜಾಗೃತಿಯನ್ನು ಮೂಡಿಸಬೇಕು. ಪ್ರಯಾಣಿಕರ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಹೊಸಪೇಟೆ ಸಾರಿಗೆ ನಿಗದಮಲ್ಲಿ ಮಾಸ್ಕ್​ ವಿತರಣೆ

ಸರ್ಕಾರಿ ಸಾರಿಗೆ ವಾಹನಗಳನ್ನು ಸ್ವಚ್ಛವಾಗಿರಿಸಬೇಕು. ಸರ್ಕಾರಿ ವಾಹನಗಳಲ್ಲಿ ಪ್ರಯಾಣಿಕರಿಗೆ ಆರೋಗ್ಯ ಭಾಗ್ಯ ಸಿಗಬೇಕು ಎಂದರು. ಪ್ರಯಾಣಿಕರಿಗೆ ಮಾಸ್ಕ್​ ಧರಿಸುವಂತೆ ತಿಳುವಳಿಕೆ ನೀಡಬೇಕು. ಕೆಮ್ಮು, ಸೀನು ಅಥವಾ ಜ್ವರದಂತಹ ಕಾಯಿಲೆಗಳಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗವಂತೆ ಹೇಳಬೇಕು. ಜ್ವರ, ತೆಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಕೊರೊನಾ ವೈರಸ್‌ನ ಲಕ್ಷಣಗಳಾಗಿವೆ ಎಂದರು.

ABOUT THE AUTHOR

...view details