ಕರ್ನಾಟಕ

karnataka

ETV Bharat / state

ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಲಾಕ್ ಡೌನ್ ಅಡ್ಡಿ: ಟ್ವೀಟ್​ ಮಾಡಿದ ಯುವಕನಿಗೆ ಎಸ್ಪಿ ಸ್ಪಂದನೆ - ಲಾಕ್ ಡೌನ್ ಎಫೆಕ್ಟ್​

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿಗೆ ತೆರಳಿ ಅಲ್ಲಿರುವ ತಮ್ಮ ಕ್ಯಾನ್ಸರ್​ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಪಾಸ್​ ನೀಡಿ ಎಂದು ಮನವಿ ಮಾಡಿ ಎಸ್​ಪಿ ಸಿ. ಕೆ. ಬಾಬಾ ಅವರಿಗೆ ಟ್ವಿಟರ್​ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶಕ್ಕೆ ಎಸ್​ಪಿಯವರು ನೀಡಿರುವ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Corona effect:A man tweeted District SP requesting for pass
ಕ್ಯಾನ್ಸರ್ ಪೀಡಿತೆ ತಾಯಿಗೆ ಚಿಕಿತ್ಸೆ ಕೊಡಿಸಲೂ ಲಾಕ್ ಡೌನ್ ಅಡ್ಡಿ: ಪಾಸ್ ಗಾಗಿ ಜಿಲ್ಲಾ ಎಸ್​ಪಿಯ ಟ್ವಿಟರ್ ಖಾತೆಯ ಮೊರೆ!

By

Published : Apr 16, 2020, 11:49 AM IST

ಬಳ್ಳಾರಿ:ಕ್ಯಾನ್ಸರ್​​ನಿಂದ ಬಳಲುತ್ತಿದ್ದ ತನ್ನ ತಾಯಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ವರಿಷ್ಠಾಧಿಕಾರಿ ಟ್ವಿಟರ್​ ಖಾತೆಗೆ ತನ್ನ ಸಮಸ್ಯೆಯನ್ನು ಟ್ಯಾಗ್​ ಮಾಡುವ ಮೂಲಕ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.

ಜಿಲ್ಲೆಯ ಹೊಸಪೇಟೆ ನಗರ ಮೂಲದ ಸಂದೀಪ್ ಕುಲಕರ್ಣಿ ಎಂಬುವವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಟ್ವಿಟರ್ ಖಾತೆಯಲ್ಲಿ ಬೆಂಗಳೂರಿಗೆ ಹೋಗಲು ಅನುಮತಿ ನೀಡುವಂತೆ ಹಾಗೂ ಅಗತ್ಯ ಪಾಸ್ ನೀಡಬೇಕೆಂದು ಕೋರಿದ್ದಾರೆ.

ಟ್ವಿಟರ್ ಮನವಿಯ ಸಂದೇಶ ಹೀಗಿದೆ:

ನನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ನಾನು ಬೆಂಗಳೂರಿಗೆ ಹೋಗಬೇಕಿದ್ದು, ಅಗತ್ಯ ಪಾಸ್‌ ನೀಡಬೇಕು. ಸದ್ಯ ಅವರೊಬ್ಬರೇ ಬೆಂಗಳೂರಿನಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕಿದೆ. ಆದರೆ, ನಾನು ಲಾಕ್‌ಡೌನ್‌ನಿಂದಾಗಿ ಊರಿನಲ್ಲೇ ಸಿಲುಕಿಕೊಂಡಿದ್ದೇನೆ. ನನಗೆ ಪಾಸ್‌ ಕೊಟ್ಟರೆ ಬೆಂಗಳೂರಿಗೆ ಹೋಗಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯವಾಗುತ್ತದೆ ಎಂದು ಸಂದೀಪ್‌ ಕುಲಕರ್ಣಿ ಮನವಿ ಮಾಡಿದ್ದಾರೆ.

ಪಾಸ್ ಗಾಗಿ ಜಿಲ್ಲಾ ಎಸ್​ಪಿಯ ಟ್ವಿಟರ್ ಖಾತೆಯ ಮೊರೆ

ಇನ್ನೂ ಇದಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಅವರು ಸಕಾರಾತ್ಮವಾಗಿ ಸ್ಪಂದಿಸಿರೋದು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರ ಪತ್ರ ಹಾಗೂ ಇತರೆ ದಾಖಲೆಗಳೊಂದಿಗೆ ನನ್ನ ಕಚೇರಿಗೆ ಬಂದು ಸಂಪರ್ಕಿಸಿದರೆ ಅಗತ್ಯ ಪಾಸ್ ಗೆ ವ್ಯವಸ್ಥೆ ಮಾಡಿಕೊಡುವುದಾಗಿ ಸ್ವತಃ ಎಸ್​ಪಿ ಬಾಬಾ ಅವರೇ ಟ್ವೀಟ್ ಮಾಡಿದ್ದಾರೆ.

ಪಾಸ್ ಗಾಗಿ ಜಿಲ್ಲಾ ಎಸ್​ಪಿಯ ಟ್ವಿಟರ್ ಖಾತೆಯ ಮೊರೆ

ABOUT THE AUTHOR

...view details