ಹೊಸಪೇಟೆ: ನಗರದ ಶಾಂತಿನಿಕೇತನ ಹಾಗೂ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.
ಶಾಂತಿನಿಕೇತನ ಶಾಲೆಯಲ್ಲಿ ಮನಸೆಳೆದ ಮಕ್ಕಳ ಕ್ರೀಡಾಕೂಟ
ಕಬಡ್ಡಿ, ಕಪ್ಪೆಯಾಟ, 100 ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ ಆಟಗಳನ್ನು ಆಡಿ ಮಕ್ಕಳು ಸಂತಸಪಟ್ಟರು.
ಶಾಂತಿ ನಿಕೇತನ ಶಾಲೆ
ಕಬಡ್ಡಿ, ಕಪ್ಪೆಯಾಟ, 100 ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ ಆಟಗಳನ್ನು ಆಡಿ ಮಕ್ಕಳು ಸಂತಸಪಟ್ಟರು. ಈ ವೇಳೆ ಮಾತನಾಡಿದ ಶಿಕ್ಷಕಿ ನಾಗರತ್ನ, ಮಕ್ಕಳು 4 ಗೋಡೆಗಳ ಮಧ್ಯೆ ಶಿಕ್ಷಣವನ್ನು ಕಲಿಯುವುದಕ್ಕಿಂತ ಜನರ ಮಧ್ಯೆ ಹಾಗೂ ಕ್ರೀಡೆಗಳಿಂದ ಕಲಿತರೆ ಬೆಳವಣಿಗೆ ಸಾಧ್ಯ ಎಂದರು.
ಶಾಲೆಯಲ್ಲಿ ಮಾತ್ರ ಶಿಕ್ಷಕರು ಪಾಠಗಳನ್ನು ಓದುವುದು, ಬರೆಯುವುದು ಕಲಿಸಲು ಸಾಧ್ಯ. ಶಾಲೆಗಿಂತ ಅವರು ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಕಲಿಕೆ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಮಕ್ಕಳಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದರು.