ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು - ಬಳ್ಳಾರಿ ಲೇಟೆಸ್ಟ್​ ನ್ಯೂಸ್

ಬಳ್ಳಾರಿಯ ಮಿಲ್ಲರ್​ ಪೇಟೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ರೂಸ್​ಪೇಟೆ ಪೊಲೀಸ್​ ಠಾಣೆಯ ಎಎಸ್‍ಐ ಲೋಕರಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

bruce-downtown-police-stop-child-marriage-in-bellary
ಗಣಿನಾಡಿನಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

By

Published : Oct 29, 2020, 7:41 PM IST

ಬಳ್ಳಾರಿ:ನಗರದ ಮಿಲ್ಲರ್​ ಪೇಟೆಯ ಗಡ್ಡೆಕೆಳಗಿನ ಯಲ್ಲಮ್ಮ ದೇವಸ್ಥಾನದ ಹತ್ತಿರದ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

ಗಣಿನಾಡಿನಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

ಯಲ್ಲಮ್ಮ ದೇವಸ್ಥಾನದ ಹತ್ತಿರ ಸಮುದಾಯ ಭವನದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ರೂಸ್​ಪೇಟೆ ಪೊಲೀಸ್​ ಠಾಣೆಯ ಎಎಸ್‍ಐ ಲೋಕರಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಜೊತೆಗೆ ಯುವತಿಯನ್ನು ಮದುವೆಯಾಗುತ್ತಿದ್ದ ಸುರೇಂದ್ರ ಎಂಬ ವ್ಯಕ್ತಿ, ಬಾಲಕಿಯ ತಂದೆ-ತಾಯಿ, ಮದುವೆಗೆ ಸಹಕರಿಸಿದ ಪುರೋಹಿತ ಶೇಷಗಿರಿಸ್ವಾಮಿ ಸೇರಿದಂತೆ ಬಾಲ್ಯವಿವಾಹಕ್ಕೆ ಸಹಕರಿಸಿದವರೆಲ್ಲರ ಮೇಲೆ ಬಳ್ಳಾರಿಯ ಮಹಿಳಾ ಪೊಲೀಸ್​ ಠಾಣೆಯಲ್ಲಿ ಬಾಲ್ಯ ವಿವಾಹ ಕಾಯ್ದೆಯಡಿ ರಿತ್ಯಾ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ABOUT THE AUTHOR

...view details