ಕರ್ನಾಟಕ

karnataka

ETV Bharat / state

ರಸ್ತೆ ಸುರಕ್ಷತೆ ಬಗ್ಗೆ ಒಂದು ವಾರ ಜಾಗೃತಿ: ಆರ್​ಟಿಒ ಶ್ರೀಧರ್ - National Road Safety Saptha in bellary

31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕುರಿತು ಜಾಗೃತಿ ಕೆಲಸ ಆರಂಭವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮನ್ನಾಡ್ ತಿಳಿಸಿದರು.

Bellary: National Road Safety Saptha
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

By

Published : Jan 16, 2020, 4:42 AM IST

ಬಳ್ಳಾರಿ: 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕುರಿತು ಒಂದು ವಾರ ಜಾಗೃತಿ ಮೂಡಿಸುವ ಕೆಲಸ ಇಂದಿನಿಂದ ಆರಂಭವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮನ್ನಾಡ್ ತಿಳಿಸಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಬಳ್ಳಾರಿ ಸೆಂಟರ್​ನರಿ ಹಾಲ್ ಸಭಾಂಗಣದಲ್ಲಿ ಬಳ್ಳಾರಿ ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಮತ್ತು ಸನ್ಮಾಗ ಗೆಳೆಯರ ಬಳಗದ ನೇತೃತ್ವದಲ್ಲಿ ಸಪ್ತಾಹ 2020 ಉದ್ಘಾಟನಾ ಸಮಾರಂಭ ನಡೆಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ.ಮನ್ನಾಡ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು, ಕಚೇರಿಯ ಸಿಬ್ಬಂದಿ, ಅಧಿಕಾರಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ತಿಳಿಸಲಾಗುತ್ತದೆ. ಜಾಥಾ, ಬೈಕ್ ಜಾಥಾ, ಕರಪತ್ರ ಹಂಚುವಿಕೆ, ಮ್ಯಾರಥಾನ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಈ ವಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ರಸ್ತೆಯ ನಿಯಮಗಳು, ಚಾಲಕನ ಅರ್ಹತೆ, ಮಹತ್ವದ ಬಗ್ಗೆ ಆಟೋ ಚಾಲಕರಿಗೆ ಮಾಹಿತಿ ನೀಡಿದರು. ಎಸ್.ಪಿ ಸಿ.ಕೆ ಬಾಬಾ, ಸಿ.ಪಿ.ಐ ನಾಗರಾಜ್, ಡಿವೈಎಸ್ಪಿ ಮಹೇಶ್ವರ ಗೌಡರು, ಶ್ರೀನಿವಾಸ್ ಗಿರಿ, ಲಕ್ಷ್ಮಿಕಾಂತ ರೆಡ್ಡಿ ಮತ್ತು ನೂರಾರು ಆಟೋ ಚಾಲಕರು ಹಾಜರಿದ್ದರು.

ABOUT THE AUTHOR

...view details