ಬಳ್ಳಾರಿ:ಕೊರೊನಾ ನಂತರ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಪ್ರವೇಶಾತಿಗೆ ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಈ ಸಿನಿಮಾ ಮಂದಿರವೊಂದು ಭರ್ಜರಿ ಟಿಕೆಟ್ ಆಫರ್ ನೀಡುವ ಮೂಲಕ ಪ್ರೇಕ್ಷರನ್ನು ತನ್ನತ್ತ ಸೆಳೆಯು ಪ್ರಯತ್ನಕ್ಕೆ ಮುಂದಾಗಿದೆ.
ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ ಕಳೆದ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಪ್ರಾರಂಭವಾಗಿದ್ದು, ಸಿನಿಮಾಗಳು ತೆರೆ ಕಾಣುತ್ತಿವೆ. ಆದರೆ ಕೊರೊನಾ ಕಾರಣದಿಂದಾಗಿ ಜನರು ಥಿಯೇಟರ್ಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ನಟರಾಜ ಚಿತ್ರಮಂದಿರದ ಮಾಲೀಕರು ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಬ್ಲಾಕ್ ಬಸ್ಟರ್ ಮೂವೀಸ್ ಬ್ಯಾನರ್ ಅಡಿ ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತವಾಗಿ ನೀಡುತ್ತಿದ್ದು, ಈ ಮೂಲಕ ಕನ್ನಡ, ತೆಲುಗು ಹಾಗೂ ತಮಿಳು ಸೇರಿ ನಾನಾ ಭಾಷೆಯ ಸಿನಿಮಾಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಾರೆ.
ಪ್ರೇಕ್ಷಕರಿಗೆ ಭರ್ಜರಿ ಸಿನಿಮಾ ಟಿಕೆಟ್ ಆಫರ್ ನೀಡಿದ ಚಿತ್ರಮಂದಿರ ಈ ಕುರಿತಂತೆ ಈಟಿವಿ ಭಾರತದೊಂದಿಗೆ ನಟರಾಜ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದ್ದು, ಫೆ.10 ರಿಂದ 18ರವರೆಗೆ ಈ ಆಫರ್ ನೀಡಲಾಗಿದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳು ಬಿಡುಗಡೆಯಾದರೆ ಗುರುವಾರ ಮತ್ತು ಶುಕ್ರವಾರದಂದು ಟಿಕೆಟ್ಗಳಲ್ಲಿ ವಿಶೇಷ ವಿನಾಯಿತಿ ನೀಡುವ ಚಿಂತನೆ ಇದೆ ಎಂದರು.
ಓದಿ: ಬೆಂಗಳೂರಲ್ಲೂ ಐಟಿ ದಾಳಿ: ಸಪ್ತಗಿರಿ, ಬಿಜಿಎಸ್ ಆಸ್ಪತ್ರೆ, ವಿದ್ಯಾಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ
ಕೋವಿಡ್ ಕಾರಣದಿಂದ ಸಿನಿಮಾ ಮಂದಿರಗಳತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ಲಾಕ್ಡೌನ್ ಎಫೆಕ್ಟ್ನಿಂದಾಗಿ ಸಾರ್ವಜನಿಕರು ಸೇರಿದಂತೆ ಎಲ್ಲಾ ರಂಗದಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದೆ. ಆ ಪೈಕಿ ಸಿನಿಮಾ ಮಂದಿರಗಳೂ ಕೂಡ ಒಂದಾಗಿದೆ. ವ್ಯಾಕ್ಸಿನೇಷನ್ ಬಂದಾಗಿದ್ದು, ಕೋವಿಡ್ ಸೋಂಕು ಹರಡುವಿಕೆಯ ಭಯ ಈಗ ಕಾಡುತ್ತಿಲ್ಲ. ಹೀಗಾಗಿ ಕೌಟುಂಬಿಕ ಹಿನ್ನೆಲೆಯುಳ್ಳ ಸಿನಿಮಾಗಳು ಬಿಡುಗಡೆಯಾದರೆ ಖಂಡಿತವಾಗಿಯೂ ಸಿನಿಮಾ ಮಂದಿರಗಳತ್ತ ಕುಟುಂಬಸ್ಥರು ಮುಖ ಮಾಡುತ್ತಾರೆ ಎಂದರು.