ಬಳ್ಳಾರಿ : ತಮ್ಮ ಸಿಬ್ಬಂದಿಯನ್ನು ಕಾರ್ಖಾನೆಯ ಟೌನ್ಶಿಪ್ನಲ್ಲಿ ಉಳಿಸಿಕೊಂಡೇ ಕೆಲಸ ಮಾಡಿಕೊಳ್ಳಬೇಕು ಮತ್ತು ಸಿಬ್ಬಂದಿ ಹೊರಗಡೆ ಹಳ್ಳಿ ಮತ್ತು ನಗರಕ್ಕೆ ಬರದ ರೀತಿಯಲ್ಲಿ ಪ್ರವೇಶ ಮತ್ತು ಹೊರಹೋಗುವಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಅನುಮತಿ ಪಡೆದು ಒಳ ಸಂಚರಿಸುವುದನ್ನು ಹೊರತುಪಡಿಸಿ ಉಳಿದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈ ಆದೇಶವು ಜೂ.18ರಿಂದ ಜಾರಿಗೆ ಬರಲಿದ್ದು, ಜೂ.30ರವರೆಗೆ ಜಾರಿಯಲ್ಲಿರಲಿದೆ. ಜಿಂದಾಲ್ ಒಳ ಪ್ರವೇಶಿಸುವಿಕೆ ಮತ್ತು ಹೊರಬರುವಿಕೆ ಗೇಟ್ ಬಳಿ ಸಂಪೂರ್ಣ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದು ವಿವರಿಸಿದ ಅವರು, ಕೋಮೋರ್ಬಿಡಿಟಿ ಪ್ರಕರಣಗಳಿಂದ 838 ಜನ ಜಿಂದಾಲ್ ಸಿಬ್ಬಂದಿ ಬಳಲುತ್ತಿದ್ದು, ಇವರನ್ನು ಸಂಬಳ ಸಹಿತ ರಜೆ ಮೇಲೆ ಜಿಂದಾಲ್ ಈಗಾಗಲೇ ಕಳುಹಿಸಲು ಒಪ್ಪಿಕೊಂಡಿದೆ ಎಂದರು.