ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಲ್ಲಿನ ನೆರೆ ಸಂತ್ರಸ್ತರ ಪುನರ್ ವಸತಿ ಕೇಂದ್ರಗಳನ್ನ ಹೊರತುಪಡಿಸಿ, ನಡವಿ ಗ್ರಾಮಕ್ಕೆ ಮಾತ್ರ ಭೇಟಿ ನೀಡುವ ಪಿಆರ್ಐ ಕಮಿಟಿಗೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಹಚ್ಚೊಳ್ಳಿ ಗ್ರಾಮಕ್ಕೆ ಭೇಟಿ ನೀಡುವಂತೆ ಪಟ್ಟುಹಿಡಿದ ಶಾಸಕರು... ಡಿಸಿ ಆದೇಶದಂತೆ ನಡವಿ ಗ್ರಾಮಕ್ಕೆ ಹೋದ ಅಧಿಕಾರಿಗಳು
ಸಿರುಗುಪ್ಪ ತಾಲೂಕಿನ ನೆರೆ ಗ್ರಾಮವಾದ ನಡವಿಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದ ವೇಳೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿರೋಧ ವ್ಯಕ್ತಪಡಿಸಿದರು.
ಶಾಸಕನ ವಿರೋಧ
ನಡಿವಿ ಗ್ರಾಮದಲ್ಲಿ ವಸತಿ ಸೌಲಭ್ಯ ಸುಸಜ್ಜಿತವಾಗಿದೆ. ಅದನ್ನು ಆಯ್ಕೆ ಮಾಡಿಕೊಂಡರೆ ಹೇಗೆ. ಹಚ್ಚೊಳ್ಳಿ ಗ್ರಾಮದಲ್ಲಿ ಬಹುತೇಕ ಕಡೆಗಳಲ್ಲಿ ಮನೆಗಳೇ ನಿರ್ಮಾಣವಾಗಿಲ್ಲ. ಈಗಿರುವ ಮನೆಗಳಲ್ಲಿ ಭಾಗಶಃ ಕುಸಿದು ಬಿದ್ದಿವೆ. ಹೀಗಾಗಿ, ಹಚ್ಚೊಳ್ಳಿ ಗ್ರಾಮಕ್ಕೆ ಭೇಟಿ ನೀಡಲೇಬೇಕೆಂದು ಪಟ್ಟು ಹಿಡಿದ್ರು. ಕೊನೆಗೂ ಜಿಲ್ಲಾಧಿಕಾರಿ ನಕುಲ್ ಅವರ ಅಣತಿಯಂತೆ ಸಮಿತಿ ಅಧ್ಯಕ್ಷರು ನಡೆದುಕೊಂಡು, ನಡಿವಿ ಗ್ರಾಮಕ್ಕೆ ಭೇಟಿ ನೀಡಿ, ಶಾಸಕ ಸೋಮಲಿಂಗಪ್ಪನವ್ರ ಕೆಂಗಣ್ಣಿಗೆ ಗುರಿಯಾದ್ರು.