ಕರ್ನಾಟಕ

karnataka

By

Published : Dec 28, 2020, 7:33 PM IST

ETV Bharat / state

ಪಡಿತರ ಅಕ್ಕಿ ಅಕ್ರಮವಾಗಿ ಮಾರಾಟ ಮಾಡಿದರೆ ಕ್ರಮ: ಡಿಸಿ ನಕುಲ್ ಎಚ್ಚರಿಕೆ

ಯಾವುದೇ ಪಡಿತರ ಚೀಟಿದಾರರು (ಅಥವಾ ಸದರಿ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರು) ತಾವು ಪಡೆದ ಆಹಾರ ಧಾನ್ಯವನ್ನು ದಾಸ್ತಾನೀರಿಸುವುದು ಅಥವಾ ಹಣಕ್ಕಾಗಿ ಮಾರಾಟ ಮಾಡುವುದು ಶಿಕ್ಷೆಯ ಜೊತೆಗೆ ದಂಡನಾರ್ಹವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರೆ.

DC Nakul
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್

ಬಳ್ಳಾರಿ: ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಯನ್ನು ಪಡಿತರ ಚೀಟಿದಾರರು ಅಕ್ರಮವಾಗಿ ಮಾರಾಟ ಮಾಡಿದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಪಡಿತರ ಚೀಟಿ ಕೂಡ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಹಾಗೂ ಇಲಾಖಾ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕುಟುಂಬ ಸಂಖ್ಯೆಗಿಂತ ಹೆಚ್ಚಿನ ಪಡಿತರ ಚೀಟಿಗಳಿವೆ. ಅಲ್ಲದೆ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದುಕೊಂಡಿದ್ದು, ವಿತರಿಸಿದ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಪಡಿತರ ಚೀಟಿದಾರರು (ಅಥವಾ ಸದರಿ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರು) ತಾವು ಪಡೆದ ಆಹಾರ ಧಾನ್ಯವನ್ನು ದಾಸ್ತಾನೀರಿಸುವುದು ಅಥವಾ ಹಣಕ್ಕಾಗಿ ಮಾರಾಟ ಮಾಡುವುದು ಶಿಕ್ಷೆಯ ಜೊತೆಗೆ ದಂಡನಾರ್ಹವಾಗಿರುತ್ತದೆ.

ಕಾರ್ಡ್‍ದಾರರು ಕಾಳಸಂತೆಯಲ್ಲಿ ಅಕ್ರಮವಾಗಿ ಪಡಿತರವನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಕಾರ್ಡ್‍ದಾರರಿಂದ ಅರ್ಹ ಪಡಿತರ ಧಾನ್ಯಗಳ ಪ್ರಮಾಣಕ್ಕೆ ಮುಕ್ತ ಮಾರುಕಟ್ಟೆಯ ಬೆಲೆಯಲ್ಲಿ ಹಣ ಭರಿಸುವುದು. ಅಂತಹ ಕಾರ್ಡ್‍ದಾರರ ಪಡಿತರ ಚೀಟಿಯನ್ನು ಆರು ತಿಂಗಳವರೆಗೆ ಅಮಾನತಿನಲ್ಲಿಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details