ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮಕ್ಕೆ ಮನಸೋತ ಪ್ರೇಕ್ಷಕರು - undefined

ಬಳ್ಳಾರಿ ನಗರದ  ಕಮ್ಮ ಭವನದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಸಾಂಸ್ಕೃತಿಕ ಉತ್ಸವ

By

Published : Jul 15, 2019, 10:46 AM IST

ಬಳ್ಳಾರಿ: ನಗರದ ಕಮ್ಮ ಭವನದಲ್ಲಿ ನಡೆದ ಸಾಂಸ್ಕೃತಿಕ ಉತ್ಸವ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಗಣಿನಾಡಿನಲ್ಲಿ ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಾ, ಪ್ರವೃತ್ತಿಯಲ್ಲಿ ಕಾಗದ ಶಿಲ್ಪಕಲೆಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ಸೃಜನಾತ್ಮಕವಾಗಿ ತಯಾರಿಸುವಂತ ಪ್ರತಿಭೆ ಕೆ.ಅರುಣ್ ಕುಮಾರ್​ರವರದ್ದಾಗಿದೆ.

ಶಿಕ್ಷಕರಾಗಿ ಗುಲ್ಬರ್ಗ, ಸಿಂಧನೂರು, ಪ್ರಸ್ತುತ ಸಿರುಗುಪ್ಪ ತಾಲೂಕಿನ ಹೆರಕಲ್ಲು ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಕಾಗದ ಶಿಲಕಲೆನ್ನು ಆರಂಭ ಮಾಡುವ ಮುಂಚೆ ಚಿತ್ರಕಲೆ ಬಿಡಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಮಾಡುತ್ತಿದ್ದರು. ಜಿಲ್ಲೆ ಸಿರುಗುಪ್ಪ ತಾಲೂಕಿನ ಕನ್ನಡ ಶಿಕ್ಷಕ ಕೆ.ಅರುಣ್ ಕುಮಾರ್ ಅವರು ಕಾಗದದ ಚಿತ್ರಕಲೆಯ ಮೂಲಕ ಪ್ರದರ್ಶನ ಪಡೆದರು. ಜಿಲ್ಲೆಯ ಕೂಡ್ಲಿಗಿಯ ದಂಪತಿ ತಂದೆ ಕೆ.ಚಂದ್ರಣ್ಣ, ತಾಯಿ ಕೆ.ಲಲಿತ ಅವರ ಏಕೈಕ ಪುತ್ರ ಕೆ.ಅರುಣ್ ಕುಮಾರ್ ಆಗಿದ್ದಾರೆ. ಬಿ.ಎ ಮತ್ತು ಡಿಎಡ್ ವಿದ್ಯಾಭ್ಯಾಸ ಮಾಡಿ, 2008 ರಲ್ಲಿ ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ.

ಸಾಂಸ್ಕೃತಿಕ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಕರ ಮತ್ತು ಮಕ್ಕಳ ನೃತ್ಯ ಮತ್ತು ಹಾಡುಗಳನ್ನು ನೋಡಿ ಪೋಷಕರು ಮತ್ತು ಕಲಾಭಿಮಾನಿಗಳು, ಪ್ರೇಷಕರು ಮನಸೋತರು

ಕಳೆದ ಎಂಟು ವರ್ಷಗಳಿಂದ ಈ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು‌.ರಾಜ್ಯದಲ್ಲಿ ಏಕೈಕ ಕಾಗದದ ಶಿಲ್ಪಕಲೆಯ ಕಲಾವಿದರಾಗಿ ರಾಯಚೂರು ರಾಜ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ರಾಜ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಿರುಗುಪ್ಪ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ, ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಿದ್ದಾರೆ.

ಸಾಂಸ್ಕೃತಿಕ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಕರ ಮತ್ತು ಮಕ್ಕಳ ನೃತ್ಯ ಮತ್ತು ಹಾಡುಗಳನ್ನು ನೋಡಿ ಪೋಷಕರು ಮತ್ತು ಕಲಾಭಿಮಾನಿಗಳು, ಪ್ರೇಷಕರು ಮನಸೋತರು ಈ ಸಮಯದಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದರು. ಒಟ್ಟಾರೆಯಾಗಿ ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಾ , ಪ್ರೌವೃತ್ತಿಯಲ್ಲಿ ಕಾಗದ ಶಿಲ್ಪಕಲೆಯಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ತಯಾರು ಮಾಡಿ ಜನರ ಗಮನಸೆಳೆದಿದ್ದು ವಿಶೇಷವಾಗಿತ್ತು.

For All Latest Updates

TAGGED:

ABOUT THE AUTHOR

...view details