ವಿಜಯನಗರ: ಪಾತ್ರೆಗೆ ಬಿಸಿ ನೀರು ಹಾಕುತ್ತಿದ್ದಾಗ ಕೈಜಾರಿ ಮೈಮೇಲೆ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಹೂವಿನ ಹಡಗಲಿಯ ಮಹಮ್ಮದ್ ರಫಿ ಮತ್ತು ಸಿಮ್ರನ್ ಬಾನು ದಂಪತಿಯ ಪುತ್ರಿ ಶಿಫಾ ಅಂಜುಂ(4) ಸಾವಿಗೀಡಾದ ಮಗು.
ವಿಜಯನಗರ: ಬಿಸಿ ನೀರಿನ ಪಾತ್ರೆ ಬಿದ್ದು 4 ವರ್ಷದ ಬಾಲಕಿ ಸಾವು - burn alive
ಬಿಸಿ ನೀರಿನ ಪಾತ್ರೆ ಮೈಮೇಲೆ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಶೃಂಗಾರತೋಟ ಗ್ರಾಮದಲ್ಲಿ ನಡೆದಿದೆ.
ವಿಜಯನಗರ: ಬಿಸಿ ನೀರಿನ ಪಾತ್ರೆ ಬಿದ್ದು 4 ವರ್ಷದ ಬಾಲಕಿ ಸಾವು
ತಾಯಿ ಸಿಮ್ರನ್ ಭಾನುವಾರ ಕಾಯಿಸಿದ ಬಿಸಿನೀರನ್ನು ಬೇರೊಂದು ಪಾತ್ರೆಗೆ ಹಾಕುತ್ತಿದ್ದಾಗ ಕೈಜಾರಿ ಬಿಸಿ ನೀರು ಬಾಲಕಿಯ ಕೈ, ಕಾಲಿನ ಮೇಲೆ ಬಿದ್ದಿದೆ. ಮಗುವಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಲಬುರಗಿ: ಶಾಲಾ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ಕೆರೆಯಲ್ಲಿ ಮುಳುಗಿ ಸಾವು