ಕರ್ನಾಟಕ

karnataka

ETV Bharat / state

ಜೂ.29 ರಿಂದ ಬಳ್ಳಾರಿಯ 20 ವಲಯಗಳಲ್ಲಿ 24x7 ಕುಡಿವ ನೀರು : ಸಚಿವ ಬಿ.ಎ. ಬಸವರಾಜ

ಬಳ್ಳಾರಿ ನಗರದ 13 ವಲಯ ಮತ್ತು ಹೊಸಪೇಟೆ ನಗರದ 7 ವಲಯಗಳಲ್ಲಿ 24x7 ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೆಲಸಗಳು ಮುಗಿಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವತಃ ನಾನೇ ಜೂ. 29ರಂದು ಈ ಎರಡು ನಗರಗಳಲ್ಲಿ ಚಾಲನೆ ನೀಡುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ ಹೇಳಿದ್ದಾರೆ.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ

By

Published : May 14, 2020, 5:14 PM IST

Updated : May 14, 2020, 5:53 PM IST

ಬಳ್ಳಾರಿ: ನಗರದ 13 ವಲಯಗಳಲ್ಲಿ ಮತ್ತು ಹೊಸಪೇಟೆ ನಗರದ 7 ವಲಯಗಳಲ್ಲಿ 24x7 ನಿರಂತರ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಜೂ. 29 ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದ್ದಾರೆ.

ಬಳ್ಳಾರಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ್ರು. ಇನ್ನೂ ಒಂದು ತಿಂಗಳೊಳಗೆ ಈ ವಲಯಗಳಲ್ಲಿ 24x7 ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೆಲಸಗಳು ಮುಗಿಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ವತಃ ನಾನೇ ಜೂ. 29ರಂದು ಈ ಎರಡು ನಗರಗಳಲ್ಲಿ ಚಾಲನೆ ನೀಡುತ್ತೇನೆ. ಅದಕ್ಕೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ

ಬಳ್ಳಾರಿಯಲ್ಲಿ ಮೊದಲ ಹಂತದಲ್ಲಿ ಕೈಗೊಳ್ಳಲಾದ 28 ವಲಯಗಳಲ್ಲಿ 13 ವಲಯಗಳಲ್ಲಿ ನೀರು ಸರಬರಾಜು ಆರಂಭವಾಗಲಿದ್ದು, ಉಳಿದ ವಲಯಗಳಲ್ಲಿ ಡಿಸೆಂಬರ್​​ವೊಳಗೆ ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಅನಧಿಕೃತ ಕಟ್ಟಡಗಳ (ಆಸ್ತಿ) ಸಮೀಕ್ಷೆ ಮಾಡಿ:

ಬಳ್ಳಾರಿ ನಗರದ ವಾರ್ಡ್ ಸಂಖ್ಯೆ 1ರಲ್ಲಿ ಪ್ರಾಯೋಗಿಕವಾಗಿ ಅನಧಿಕೃತ ಕಟ್ಟಡಗಳ (ಆಸ್ತಿ) ಸಮೀಕ್ಷೆ ಮಾಡಿದಂತೆ, ಇಡೀ ನಗರದಲ್ಲಿರುವ ಎಲ್ಲ ವಾರ್ಡ್​ಗಳಲ್ಲಿಯೂ ಇದೇ ರೀತಿಯ ಸಮೀಕ್ಷೆ ಮಾಡಿ ಒಂದು ತಿಂಗಳೊಳಗೆ ವರದಿ ಕೊಡಿ ಎಂದು ಸಚಿವ ಭೈ ರತಿ ಬಸವರಾಜು ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

Last Updated : May 14, 2020, 5:53 PM IST

ABOUT THE AUTHOR

...view details