ಬೆಳಗಾವಿ: ಹೃದಯ ಸಂಬಂಧಿ ಚಿಕಿತ್ಸೆಗೆ ಬಾಗಲಕೋಟೆಯಿಂದ 13 ದಿನದ ಮಗು ಕರೆದುಕೊಂಡು ಬರುತ್ತಿದ್ದ ವಾಹನಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಬೆಳಗಾವಿ ಮಹಾನಗರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೃದಯ ಚಿಕಿತ್ಸೆಗಾಗಿ 13 ದಿನದ ಮಗುವಿಗೆ ಝಿರೋ ಟ್ರಾಫಿಕ್: ಸಾರ್ವಜನಿಕರಿಂದ ಮೆಚ್ಚುಗೆ
ಹೃದಯ ಸಂಬಂಧಿ ಚಿಕಿತ್ಸೆಗೆ ಬಾಗಲಕೋಟೆಯಿಂದ 13 ದಿನದ ಮಗು ಕರೆದುಕೊಂಡು ಬರುತ್ತಿದ್ದ ವಾಹನಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ಬೆಳಗಾವಿ ಮಹಾನಗರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಧೋಳದ ಮುಬಿನಾ ಯಲಿಗಾರ ಎಂಬುವವರ 13 ದಿನದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು, ಮುಧೋಳದಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಆಂಬುಲೆನ್ಸ್ ಮೂಲಕ ಕರೆತರಲಾಯಿತು. ಮಾಹಿತಿ ತಿಳಿದ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್, ಕರಡಿಗುದ್ದಿ ಗ್ರಾಮದಿಂದ ಕೆಎಲ್‍ಇ ಆಸ್ಪತ್ರೆವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.
ಮುಧೋಳದಿಂದ ಆಂಬುಲೆನ್ಸ್ ಮೂಲಕ ಮಗುವನ್ನು ಕರೆತರುತ್ತಿರುವ ವಿಷಯ ಕಂಟ್ರೋಲ್ ರೂಂಗೆ ಮಾಹಿತಿ ಲಭ್ಯವಾಗಿದೆ, ಕೂಡಲೇ ಮಾರಿಹಾಳ, ಮಾಳಮಾರುತಿ ಹಾಗೂ ಉತ್ತರ ಸಂಚಾರ ಠಾಣೆಯ ಪೊಲೀಸರಿಗೆ ಕಮಿಷನರ್ ಲೋಕೇಶ್ ಕುಮಾರ್ ಮಾಹಿತಿ ನೀಡಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ, ಈ ಸಂದಭ್ದಲ್ಲಿ 25 ನಿಮಿಷಗಳ ಕಾಲ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸರ ಕಾರ್ಯಕ್ಕೆ ಮಗುವಿನ ತಾಯಿ ಮುಬಿನಾ ಅಷ್ಟೇ ಅಲ್ಲದೇ ನಗರದ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.