ಬೆಳಗಾವಿ:ಸಿಲಿಂಡರ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿಯಿಂದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
ಗ್ಯಾಸ್ ಆನ್ ಮಾಡಿ ಲೈಟರ್‌ಗೆ ಹುಡುಕಾಟ; ಬೆಂಕಿ ಹೊತ್ತಿಕೊಂಡು ಯುವಕ ಸಾವು - cylinder blast
ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ನರ್ಸಿಂಗ್ ಓದುತ್ತಿದ್ದ ಶ್ರೀಧರ್ ಪ್ಯಾಟಿ ಎಂಬ ಯುವಕ ಮೃತಪಟ್ಟಿದ್ದಾನೆ.
ಸಿಲಿಂಡರ್ ಸೋರಿಕೆಯಾಗಿ ಬೆಂಕಿ
ಶ್ರೀಧರ್ ಪ್ಯಾಟಿ (19) ಮೃತ ಯುವಕ. ಮನೆಯಲ್ಲಿ ಸಂಜೆ ವೇಳೆ ಟೀ ಮಾಡಲು ಹೋಗಿದ್ದಾಗ ಗ್ಯಾಸ್ ಆನ್ ಮಾಡಿ ಲೈಟರ್ ಹುಡುಕಿದ್ದಾನೆ. ಸ್ವಲ್ಪ ಸಮಯದ ಬಳಿಕ ಲೈಟರ್ ಸಿಕ್ಕಿದೆ. ಅಷ್ಟೊತ್ತಿಗಾಗಲೇ ಅಡುಗೆ ಮನೆ ತುಂಬಾ ಗ್ಯಾಸ್ ಹರಡಿತ್ತು. ಲೈಟರ್ ಹಚ್ಚುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಯುವಕ ಸಾವಿಗೀಡಾಗಿದ್ದಾನೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ವಾಣಿಜ್ಯನಗರಿಯಲ್ಲಿ ಅಗ್ನಿ ಅವಘಡ: ಸಿಲಿಂಡರ್ ಸೋರಿಕೆಯಿಂದ ಹತ್ತಿದ ಬೆಂಕಿ