ಕರ್ನಾಟಕ

karnataka

ETV Bharat / state

ಪರಿಹಾರ ಕೇಂದ್ರದ ಆಹಾರ ಸೇವಿಸಿ ಪ್ರವಾಹ ಸಂತ್ರಸ್ತ ಮಹಿಳೆ ಸಾವು..!

ಸಂತ್ರಸ್ತೆ ಮಹಿಳೆಯೊಬ್ಬಳು ಪರಿಹಾರ ಕೇಂದ್ರದ ಆಹಾರ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಯಾದವಾಡದಲ್ಲಿ ನಡೆದಿದೆ.

ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ

By

Published : Aug 20, 2019, 1:54 AM IST

ಬೆಳಗಾವಿ:ಪರಿಹಾರ ಕೇಂದ್ರದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಸಂತ್ರಸ್ತೆ ಮಹಿಳೆಯೊಬ್ಬಳು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾದವಾಡದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ದೊಡಮಂಗಡಿ‌ ಗ್ರಾಮದ ನಿವಾಸಿ ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ.

ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ

ಮಲಪ್ರಭಾ ಡ್ಯಾಂನಿಂದ ಬಿಡಲಾದ ನೀರಿನಿಂದ ದೊಡಮಂಗಡಿ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು. ಇದರಿಂದ ಜಿಲ್ಲಾಡಳಿತವು ದೊಡಮಂಗಡಿ ಗ್ರಾಮವನ್ನು ಯಾದವಾಡ ಗ್ರಾಮದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಈ ವೇಳೆ ಪರಿಹಾರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿದ್ದ ಗ್ರಾಮದ ಮಹಿಳೆ ಮಹಾದೇವಿ ಮಲ್ಲಾಡಿ, ವಾಂತಿ - ಭೇದಿಯಿಂದ ಬಳಲುತ್ತಿದ್ದಳು.

ಬಳಿಕ ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಹಾದೇವಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ರಾಮದುರ್ಗ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ABOUT THE AUTHOR

...view details