ಬೆಳಗಾವಿ:ಅಥಣಿ ತಾಲೂಕಿನ ಸುಟ್ಟಟ್ಟಿಯಿಂದ ಕೊಕಟನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಮಾರು 18 ವರ್ಷಗಳಿಂದ ರಸ್ತೆ ಕಾಮಗಾರಿ ನಡೆಸಿಲ್ಲ ಎಂಬ ಅರೋಪಗಳು ಕೇಳಿಬಂದಿವೆ. ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಜನರು ಪ್ರಾಣ ಭಯದಿಂದ ಸಂಚರಿಸುವ ವಾತಾವರಣ ಸೃಷ್ಟಿಯಾಗಿದೆ.
ಅಥಣಿ ತಾಲೂಕಿನ ಕೊನೆಯ ಹಳ್ಳಿಯಾಗಿರುವ ಕಾರಣ ಈ ರಸ್ತೆ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನಿತ್ಯ ನೂರಾರು ವಿದ್ಯಾರ್ಥಿಗಳು ನಾಲ್ಕು ಕಿಲೋ ಮೀಟರ್ ದೂರ ಇರುವ ಶಾಲೆಗೆ ಹದಗೆಟ್ಟ ರಸ್ತೆಯಲ್ಲೇ ಸೈಕಲ್ ಮೂಲಕ ಸಂಚರಿಸುತ್ತಾರೆ.