ಚಿಕ್ಕೋಡಿ : ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿಯನ್ನು ಹಿಡಿದು ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ದೇವರ ದರ್ಶನ ಪಡೆಯಲು ಮುಂದಾಗಿದ್ದಾರೆ, ಇದರ ಜೊತೆಗೆ ಕಟ್ಟಿಗೆಯ ಮುರಗಾಲುಗಳನ್ನು ಕಟ್ಟಿಕೊಂಡು ಪಾದಯಾತ್ರೆಯನ್ನ ಮಾಡುತ್ತಿದ್ದದು ಗಮನಸೆಳೆಯಿತು.
ನೂರಕ್ಕೂ ಹೆಚ್ಚು ಸ್ತ್ರೀ, ಪುರುಷರನ್ನು ಹೊಂದಿರುವ ಈ ಭಕ್ತ ತಂಡ ದಿನಂಪ್ರತಿ 30 ರಿಂದ 40 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಯುಗಾದಿ ಹಬ್ಬಕ್ಕೆ ಸುಮಾರು 600 ಕಿಲೋಮೀಟರ್ ದೂರವಿರುವ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ತಲುಪಲಿದ್ದಾರೆ.