ಕರ್ನಾಟಕ

karnataka

ETV Bharat / state

ಹೆಚ್​​ಡಿಕೆ, ಭಗವಾನ್, ನಿಜಗುಣಾನಂದ ಶ್ರೀ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೆದರಿಕೆ ಪತ್ರ!

ನಿಜಗುಣಾನಂದ ಸ್ವಾಮೀಜಿ ಮಠಕ್ಕೆ ಬೆದರಿಕೆ ಪತ್ರವೊಂದು ಬಂದಿದೆ. ಅದರಲ್ಲಿ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಹೆಚ್​ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಕಲಬುರಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದೆ.

ಬೆದರಿಕೆ ಪತ್ರ
Unknown person send threatening letter to Nijagunananda swamiji, prakash raj, Bhagavan

By

Published : Jan 24, 2020, 7:13 PM IST

ಬೆಳಗಾವಿ:ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ಪ್ರೊ. ಭಗವಾನ್ ಸೇರಿ 15 ಜನ ಪ್ರಗತಿಪರರನ್ನು ಹತ್ಯೆಗೈಯುವುದಾಗಿ ಬೆದರಿಕೆ ಪತ್ರವೊಂದು ಶ್ರೀಗಳ ಮಠಕ್ಕೆ ಬಂದಿದೆ.

ಇದೇ ತಿಂಗಳು 29 ರಂದು ಹತ್ಯೆ ಮುಹೂರ್ತ ನಿಗದಿ ಮಾಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕಲಬುರಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದ್ದು, ಜೇವರ್ಗಿಯಲ್ಲಿರುವ ನಿಜಗುಣಾನಂದ ಸ್ವಾಮೀಜಿಗೆ ಭಾರಿ ಭದ್ರತೆ ಒದಗಿಸಲಾಗಿದೆ.

ಬೆದರಿಕೆ ಪತ್ರ

ಈ ಹಿಂದೆ ಕೂಡ ಶ್ರೀಗಳಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಶ್ರೀಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆದರಿಕೆ ಕರೆ ಶಿವಮೊಗ್ಗದಿಂದ ಬಂದಿದ್ದು, ಆರೋಪಿ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಇದೀಗ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಹೆಚ್​ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೇದರಿಕೆ ಬಂದಿದೆ.

ನಿಜಗುಣಾನಂದ ಸ್ವಾಮೀಜಿ, ಮಹೇಂದ್ರ ಕುಮಾರ್, ನಿಡುಮಾಮಿಡಿ‌ ಚೆನ್ನಮಲ್ಲ ಸ್ವಾಮೀಜಿ, ಚಿತ್ರ ನಟ ಪ್ರಕಾಶ್​ ರಾಜ್, ಜ್ಞಾನ ಪ್ರಕಾಶ್​ ಸ್ವಾಮೀಜಿ, ನಟ ಚೇತನ್​ ಕುಮಾರ್, ಪ್ರೋ. ಮಹೇಶ್​ ಚಂದ್ರಗುರು, ಪ್ರೊ. ಭಗವಾನ್, ಪತ್ರಕರ್ತ ದಿನೇಶ ಅಮಿನಮಟ್ಟು, ಹಿರಿಯ ಸಾಹಿತಿ ಚಂಪಾ, ಗಣೇಶ್​, ಅಗ್ನಿ ಶ್ರೀಧರ್, ಬೃಂದಾ ಕಾರಟ್ ಅವರನ್ನು ಇದೇ 29 ರಂದು ಹತ್ಯೆಗೈಯುವುದಾಗಿ ಆಗಂತುಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details