ಚಿಕ್ಕೋಡಿ: ವಲಸೆ ಬಂದ ಮಹೇಶ್ ಕುಮಟಳ್ಳಿಗೆ ಮೂಲ ಬಿಜೆಪಿಗ ಉಮೇಶ್ ಕತ್ತಿ ಅಡ್ಡಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇಂದು ಸಂಪುಟ ವಿಸ್ತರಣೆಯಾಗಿದ್ದು, ನೂತನ ಸಚಿವ ಸಂಪುಟದಲ್ಲಿ ಹೆಸರಿಲ್ಲದ ಮಹೇಶ್ ಕುಮಟಳ್ಳಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಮಹೇಶ್ ಕುಮಟಳ್ಳಿಗೆ ಉಮೇಶ್ ’ಕತ್ತಿ’ಯೇ ಅಡ್ಡಿ!: ಆಯಾ ಕ್ಷೇತ್ರದ ಜನರಿಗೆ ನಿರಾಸೆ
ಇಂದು ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನೂತನ ಸಚಿವ ಸಂಪುಟದಲ್ಲಿ ಹೆಸರಿಲ್ಲದ ಮಹೇಶ್ ಕುಮಟಳ್ಳಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಪಕ್ಷ ತೊರೆದು ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆದ್ದು, ಸಂಪುಟ ಸೇರಿಬೇಕಿದ್ದ ಹದಿಮೂರು ಸಚಿವರ ಪೈಕಿ ಹತ್ತು ಜನರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನ ಸಿಗಬೇಕಾಗಿದ್ದ ಮಹೇಶ್ ಕುಮಟಳ್ಳಿ ಹೆಸರನ್ನು ಸಿಎಂ ಬಿ. ಎಸ್. ಯಡಿಯೂರಪ್ಪ ಕೈ ಬಿಟ್ಟಿದ್ದಾರೆ.
ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದ್ರೆ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬೆಳಗಾವಿ ಜಿಲ್ಲೆಯ ಅಥಣಿ ಮತ ಕ್ಷೇತ್ರದ ಮಹೇಶ್ ಕುಮಟಳ್ಳಿ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಇವರಿಬ್ಬರಿಗೂ ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವುದರಿಂದ ಅಥಣಿ, ಹುಕ್ಕೇರಿ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದೆ.