ಕರ್ನಾಟಕ

karnataka

ETV Bharat / state

ಸುತ್ತಿಗೆಯಿಂದ ಹೊಡೆದು ಕೊಲೆಗೈದ ಮೂವರು ಆರೋಪಿಗಳ ಬಂಧನ - etv bharat

ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ.

ಕಲ್ಲಿನ ಕ್ವಾರಿಯಲ್ಲಿ ಶವ ಹುಡುಕಾಡುತ್ತಿರುವ ಸಿಬ್ಬಂದಿ

By

Published : Apr 2, 2019, 1:16 PM IST

ಚಿಕ್ಕೋಡಿ: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಕಲ್ಲಿನ ಕ್ವಾರಿಯಲ್ಲಿ ಎಸೆದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಬನಾಗನೂರು ಗ್ರಾಮದ ಅರವಿಂದ ಪೋಳ (39) ಕೊಲೆಗೀಡಾದ ವ್ಯಕ್ತಿ. ನಿಪ್ಪಾಣಿ ತಾಲೂಕಿನ ನಾಗನೂರು ಗ್ರಾಮದ ಸತೀಶ ಶಹಾಜಿ ಕ್ಷೀರಸಾಗರ (20), ರವಿ ಈರಣ್ಣಾ ಶಿರಗಾವಿ (20) ಮತ್ತು ಸೌರವ ಅಜೀತ ಅಥಣಿ (20) ಬಂಧಿತ ಆರೋಪಿಗಳು.

ಕಲ್ಲಿನ ಕ್ವಾರಿಯಲ್ಲಿ ಶವ ಹುಡುಕಾಡುತ್ತಿರುವ ಸಿಬ್ಬಂದಿ

ನಿಪ್ಪಾಣಿ ತಾಲೂಕಿನಲ್ಲಿಭಾನುವಾರ ಮಧ್ಯಾಹ್ನ ಮೂವರು ಯುವಕರು ಸುತ್ತಿಗೆಯಿಂದ ಅರವಿಂದನನ್ನು ಕೊಲೆ ಮಾಡಿ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ನಾಗನೂರು ಸರಹದ್ದಿನಲ್ಲಿರುವ ಎಸ್​ಎಂ ಕಾಲೇಜು ಬಳಿ ಇರುವ ಕ್ವಾರಿಯಲ್ಲಿ ಎಸೆದು ಪರಾರಿಯಾಗಿದ್ದರು.

ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details