ಬೆಳಗಾವಿ :ಆಹಾರ ಕಿಟ್‌ಗಳನ್ನು ವಿತರಣೆ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹರಡಿದ ಕಾರಣ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಕಚೇರಿ ಬಳಿ ಸಾವಿರಾರು ಜನರು ಜಮಾವಣೆಗೊಂಡಿದ್ದಾರೆ.
ಆಹಾರ ಕಿಟ್ ವಿತರಣೆ ವದಂತಿ: ಸಚಿವ ಸುರೇಶ್ ಅಂಗಡಿ ಕಚೇರಿ ಮುಂದೆ ಜನಸ್ತೋಮ - belgavi suresh angadi food kit provide news
ಆಹಾರ ಕಿಟ್ ಹಂಚಿಕೆ ವದಂತಿ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಅಂಗಡಿ ಕಚೇರಿ ಮುಂದೆ ಸಾವಿರಾರು ಜನ ಜಮಾವಣೆಗೊಂಡಿದ್ದರು.
ಸಚಿವ ಸುರೇಶ್ ಅಂಗಡಿ ಕಚೇರಿ ಮುಂದೆ ಸೇರಿದ ಸಾವಿರಾರು ಜನ
ಇಲ್ಲಿನ ಚೆನ್ನಮ್ಮ ವೃತ್ತದ ಬಳಿ ಇರುವ ಸಚಿವರ ಕಚೇರಿ ಎದುರು ಮಹಿಳೆಯರು ಸೇರಿದಂತೆ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತಿದ್ದರು. ಕಾರ್ಮಿಕ ಇಲಾಖೆಯಿಂದ ಸಚಿವರು ನಿನ್ನೆ ಎರಡು ಸಾವಿರ ಆಹಾರದ ಕಿಟ್‌ಗಳನ್ನು ವಿತರಿಸಿದ್ದರು. ಹಾಗಾಗಿ ಇಂದೂ ಕೂಡ ಆಹಾರ ಸಾಮಗ್ರಿ ಪಡೆಯಲು ಜನರು ಮುಗಿಬಿದ್ದಿದ್ದಾರೆ.