ಅಥಣಿ:ಕೊರೊನಾ ತಡೆಗೆ ಸರ್ಕಾರ ಘೋಷಿಸಿದ ಕಟ್ಟುನಿಟ್ಟಿನ ಆದೇಶಗಳಿಗೆ ಜನರ ಸ್ಪಂದನೆಯಿಂದಾಗಿ ಅಥಣಿ ಮತಕ್ಷೇತ್ರದಕ್ಕೆ ಕೊರೊನಾ ಕಾಲಿಟ್ಟಿಲ್ಲ. ಕೊರೊನಾಗೆ ಔಷಧಿಯಿಲ್ಲ. ಹಾಗಾಗಿ ಮನೆಯಲ್ಲೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗವಾಗಿದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಡಿಸಿಎಂ ಸವದಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಮಹೇಶ್ ಕುಮಟಳ್ಳಿ
ಡಿಸಿಎಂ ಸವದಿ ಮತ್ತು ನಾನು ಬಿಜೆಪಿ ಪಕ್ಷಕ್ಕೆ ಬಂದ ಬಳಿಕ ಇಬ್ಬರೂ ಕೂಡಿಯೇ ಕೆಲಸ ಮಾಡುತ್ತಿದ್ದೇವೆ. ತಾಲೂಕಿನ ಅಭಿವೃದ್ಧಿಗೆ ಇಬ್ಬರೂ ಒಂದಾಗಿಯೇ ಶ್ರಮಿಸುತ್ತಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಮಹೇಶ್ ಕುಮಟಳ್ಳಿ ಹೇಳಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಟಳ್ಳಿ, ಪ್ರತಿನಿತ್ಯ ಲಕ್ಷ ಕೋಟಿ ನಷ್ಟವಾದರೂ ಕೂಡಾ ನಮಗೆ ಜೀವ ಅಮೂಲ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊರೊನಾ ಬಗ್ಗೆ ಯಾವುದೇ ಸಂಶಯ ಇದ್ದರೆ ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಿ, ಕ್ವಾರಂಟೈನ್ ಆಗಲು ಎಲ್ಲಾ ವರ್ಗದ ಜನರೂ ಕೂಡಾ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ಬಹುಶಃ ಇನ್ನೂ ಕೆಲ ದಿನಗಳ ಕಾಲ ಲಾಕ್‌ಡೌನ್ ಮುಂದುವರೆಯುವ ಸಾದ್ಯತೆ ಇದೆ ಎಂದರು.
ಡಿಸಿಎಂ ಸವದಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ: ನಾವು ಬಿಜೆಪಿ ಪಕ್ಷಕ್ಕೆ ಬಂದ ಬಳಿಕ ಇಬ್ಬರೂ ಕೂಡಿಯೇ ಕೆಲಸ ಮಾಡುತ್ತಿದ್ದೇವೆ. ತಾಲೂಕಿನ ಅಭಿವೃದ್ಧಿಗೆ ಇಬ್ಬರೂ ಒಂದಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಶ್ರಮಿಸುತ್ತಿದ್ದೇವೆ. ಅಥಣಿ ಮತಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರು ಸಾಕಷ್ಟು ದವಸ ಧಾನ್ಯಗಳನ್ನು ಬಡ ಜನರಿಗೆ ಕೊಟ್ಟಿದ್ದಾರೆ. ಹಾಗೆಯೇ ನಾನು ಕೂಡಾ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೇನೆ. ಬಹಳಷ್ಟು ದಾನಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಸದ್ಯಕ್ಕೆ ಸರ್ಕಾರ ಎರಡು ತಿಂಗಳ ಪಡಿತರ ವಿತರಿಸಿದೆ. ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನಿಡಿದ್ದೇನೆ ಎಂದರು.