ಕರ್ನಾಟಕ

karnataka

ETV Bharat / state

ನಮ್ಮ ಕಷ್ಟಕ್ಕೆ ಬುದ್ಧಿಶಕ್ತಿ, ಅರಿವೇ ಪರಿಹಾರ; ನಿಜಗುಣಾನಂದ ಸ್ವಾಮೀಜಿ - Sri Nijagunananda Swamiji

ಸದಾಶಿವ ನಗರದ ಸ್ಮಶಾನದಲ್ಲಿ ಶಾಸಕ ಸತೀಶ್​​ ಜಾರಕಿಹೊಳಿ ಅವರ ನೂತನ ವಾಹನದ ಚಾಲನೆ ಸಮಾರಂಭದಲ್ಲಿ ಶ್ರೀ ನಿಜಗುಣಾನಂದ ಶಿವಯೋಗಿ ಸ್ವಾಮೀಜಿಗಳು ಮಾತನಾಡಿ, ದೇಶದಲ್ಲಿ ಶಬ್ದ ಜಗತ್ತನ್ನು ಆಳುತ್ತಿದೆ. ಅದನ್ನು ಆಳುತ್ತಿರೋರು ಪೂಜಾರಿಗಳು, ಪಂಚಾಂಗದವರು. ಇವರೆಲ್ಲರೂ ಶಬ್ದದ ಮೇಲೆ ಜಗತ್ತನ್ನು ಕಟ್ಟುತ್ತಾರೆ ಎಂದರು.

ಶ್ರೀ ನಿಜಗುಣಾನಂದ ಸ್ವಾಮೀಜಿ
ಶ್ರೀ ನಿಜಗುಣಾನಂದ ಸ್ವಾಮೀಜಿ

By

Published : Jul 13, 2020, 5:31 PM IST

ಬೆಳಗಾವಿ:ದೇಶದ ಯುವಕರ ಕೈಯಲ್ಲಿ ಧರ್ಮದ ಧ್ವಜವನ್ನು ನೀಡಿ ದ್ವೇಷವನ್ನು ಬೆಳೆಸುವ ಬದಲಿಗೆ ಕಾಯಕದ ಧ್ವಜವನ್ನು ನೀಡಬೇಕು ಎಂದು ಬೇಲೂರಿನ ಶ್ರೀ ನಿಜಗುಣಾನಂದ ಶಿವಯೋಗಿ ಸ್ವಾಮೀಜಿಗಳು ಹೇಳಿದ್ದಾರೆ.

ಸದಾಶಿವ ನಗರದ ಸ್ಮಶಾನದಲ್ಲಿ ಶಾಸಕ ಸತೀಶ್​​ ಜಾರಕಿಹೊಳಿ ಅವರ ನೂತನ ವಾಹನದ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಶಬ್ದ ಜಗತ್ತನ್ನು ಆಳುತ್ತಿದೆ. ಅದನ್ನು ಆಳುತ್ತಿರೋರು ಪೂಜಾರಿಗಳು, ಪಂಚಾಂಗದವರು. ಇವರೆಲ್ಲರೂ ಶಬ್ದದ ಮೇಲೆ ಜಗತ್ತನ್ನು ಕಟ್ಟುತ್ತಾರೆ ಎಂದರು.

ಬೇಲೂರಿನ ಶ್ರೀ ನಿಜಗುಣಾನಂದ ಶಿವಯೋಗಿ ಸ್ವಾಮೀಜಿ

ಜಗತ್ತಿನ ಕಷ್ಟಕ್ಕೆ ದೇವರು ಪರಿಹಾರವಲ್ಲ. ಪರಿಹಾರ ಆಗಿದ್ರೆ, ಭೂಮಿಯಲ್ಲಿ ಯಾರಿಗೂ ಕಷ್ಟವೇ ಇರುತ್ತಿಲ್ಲ. ಆದ್ರೆ, ನಮ್ಮ ಕಷ್ಟಕ್ಕೆ ಬುದ್ಧಿಮತ್ತೆ, ಅರಿವೇ ಪರಿಹಾರ ಎಂಬುದನ್ನು ಬುದ್ಧ, ಬಸವ ಹಾಗೂ ಅಂಬೇಡ್ಕರ್​​ ಸಮಾಜದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಭಯ, ಭಕ್ತಿ ಹಾಗೂ ಬದುಕಬೇಕೆಂಬ ನಿಮ್ಮಲ್ಲರ ಆಸೆಗಳನ್ನೇ ನಮ್ಮಂಥ ಸ್ವಾಮೀಜಿಗಳು ದುರುಪಯೋಗಪಡಿಸಿಕೊಳ್ಳುತ್ತಾರೆ‌ ಎಂದರು.

ದೇಶದ ಜನರಲ್ಲಿ ಇಂದಿನ ಆಧುನಿಕತೆಯ ಯುಗದಲ್ಲಿಯೂ ಕೆಳಮಟ್ಟದ ವಿಚಾರಧಾರೆಗಳಿವೆ. ಹೀಗಾಗಿ ಸಮಾಜದಲ್ಲಿ ಇಂದು ಕೂಡ ಅಂಧಶ್ರದ್ಧೆ, ಕಂದಾಚಾರ ಹಾಗೂ ಮೂಢನಂಬಿಕೆಗಳು ಜನರಲ್ಲಿ ನೆಲೆಯೂರಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಟ್ಟೆಯನ್ನು ಬಾರಸ್ರಿ ಅಂದ್ರು, ಇಡೀ ದೇಶವೆ ತಟ್ಟೆಯನ್ನು ಬಾರಿಸಿತು. ಆದ್ರೆ ಜನರಿಗೆ ವಿಜ್ಞಾನ-ತಂತ್ರಜ್ಞಾನ ಅರಿವನ್ನು ಕೊಡಬೇಕಿದ್ದ ಇಂದಿನ ಸಮಾಜದಲ್ಲಿ ರೋಗವೊಂದು ಬಂದಿದೆ. ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ, ಚಿಂತನೆ ಮಾಡೋದು ಬಿಟ್ಟು ತಟ್ಟೆ ಬಾರಸ್ರಿ ಅಂದ್ರೆ ಹೇಗೆ?..ಯಾರಿಗೆ ಹೇಳೋದು. ಮನುಷ್ಯ ಅನ್ನಕ್ಕಾಗಿ ಬಡಿದಾಡುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್​ಗಳು ಮುಖ್ಯವಲ್ಲ. ಮನುಷ್ಯತ್ವ ಇಂದು‌ ಅಧೋಗತಿಯ ಕಡೆಗೆ ಹೋಗುತ್ತಿದೆ. ಹೀಗಾಗಿ ದೇಶದ ಯುವಕರ ಕೈಯಲ್ಲಿ ಕಾಯಕದ ಧ್ವಜವನ್ನು ನೀಡಬೇಕೆಂದು ಸ್ವಾಮೀಜಿ ಹೇಳಿದರು.

ABOUT THE AUTHOR

...view details