ಕರ್ನಾಟಕ

karnataka

By

Published : Sep 24, 2019, 10:08 PM IST

ETV Bharat / state

ಸಹನೆ ಮಹಿಳೆಯ ದೌರ್ಬಲ್ಯವಲ್ಲ, ಶಕ್ತಿ:  ಶ್ರೀ ಶಿವಬಸವ ಮಹಾಸ್ವಾಮಿಗಳು

ಗಚ್ಚಿನಮಠದ ಆವರಣದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅಥಣಿ ವತಿಯಿಂದ ತಾಲೂಕಾ ಮಟ್ಟದ ಪೌಷ್ಟಿಕ ಆಹಾರ ಮೇಳ ಮತ್ತು 3097ನೇ ಸಂಘದ ಉದ್ಘಾಟನಾ ಸಮಾರಂಭ ಜರುಗಿತು.

ಸಿರಿಧಾನ್ಯ

ಅಥಣಿ:ಕರ್ನಾಟಕದಾದ್ಯಂತ ಇರುವ ಅಸಂಘಟಿತ ವಲಯದ ಮಹಿಳೆಯರಿಗೆ ಸಾಲ ಕೊಟ್ಟು ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವು ಕಾರ್ಯದಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘಗಳ ಪಾತ್ರ ದೊಡ್ಡದು, ಸಹನೆಮಹಿಳೆಯ ದೌರ್ಬಲ್ಯವಲ್ಲ ಅದು ಅವಳ ಧೈರ್ಯ. ಅದಕ್ಕಾಗಿ ಎಲ್ಲಾ ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿ ಆರ್ಥಿಕ ಸುಸ್ಥಿರತೆಯನ್ನು ಸಾಧಿಸಿ ಎಂದು ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಹೇಳಿದರು.

ಗಚ್ಚಿನಮಠದ ಆವರಣದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅಥಣಿ ವತಿಯಿಂದ ಜರುಗಿದ ತಾಲೂಕು ಮಟ್ಟದ ಪೌಷ್ಟಿಕ ಆಹಾರ ಮೇಳ ಮತ್ತು 3097ನೇ ಸಂಘದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಈಗಿನ ಅತ್ಯಾಧುನಿಕ ಯುಗದಲ್ಲಿ ಸುಸಂಸ್ಕೃತರಾಗುವುದು ಮುಖ್ಯವಲ್ಲ ಸಿರಿಧಾನ್ಯ ಆಹಾರ ಧಾನ್ಯಗಳನ್ನು ಆಹಾರದಲ್ಲಿ ತಿಂದು ಸದೃಢ ದೇಹವನ್ನು ಕಾಪಾಡಿಕೊಳ್ಳುವುದು ಮಖ್ಯವಾಗಿದೆ ಹಾಗೂ ದೇವರು ಕೊಟ್ಟಿರುವಂತಹ ಇಲ್ಲ ಸಲ್ಲಗಳ ನಡುವೇ ಸಂತೃಪ್ತಿಯ ಬದುಕನ್ನು ಸಾಗಿಸುತ್ತಿರುವ ಮಹಿಳೆ ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಅವರು ವಿದೇಶಿ ಆಹಾರದತ್ತ ವಾಲಿದ ಭಾರತೀಯರು ಸಾಂಪ್ರದಾಯಿಕ ಶೈಲಿಯ ಆಹಾರವನ್ನು ಮರೆತು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ ಅದಲ್ಲದೆ ಈ ಹಿಂದೆ ಬಡವರು ತಿನ್ನುತ್ತಿದ್ದ ಈ ಸಿರಿಧಾನ್ಯ ಆಹಾರವನ್ನು ಶ್ರೀಮಂತರು ಹೆಚ್ಚಿನ ಹಣಕೊಟ್ಟು ತಿನ್ನುತ್ತಿದ್ದಾರೆ. ಬಡವರು ಮಾತ್ರ ಅಸತ್ವಯುತವಾದ ಆಹಾರವನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ನಿರ್ದೆಶಕರು ಕೃಷ್ಣಾ ಟಿ, ಮುತ್ತಪ್ಪ ಕೊಪ್ಪದ, ತಾಲೂಕಿನ ಯೋಜನಾಧಿಕಾರಿ ರಾಜು ನಾಯಕ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ದ್ರಾಕ್ಷಾಯಿನಿ ಬಿಸ್ವಾಗರ, ಸಂಜೀವ ಎಸ್ ಬಿ, ಗೀತಾ ಮಡ್ಡಿ, ಶಂಭುಕೃಷ್ಣ ಪಟಗಾರ, ರಾಮದಾಸಗೌಡ, ಅನೀಲ ಹಡಪದ, ಭೀಮಪ್ಪ ಮರಿಯನ್ನವರ, ಸದಾಶಿವ ಚೌಗಲಾ ಹಾಗೂ 25 ಹೊಸಕೇಂದ್ರದ ಎಲ್ಲ ಸದಸ್ಯರು ಭಾಗವಹಿಸಿದ್ದರು.

ABOUT THE AUTHOR

...view details