ಕರ್ನಾಟಕ

karnataka

ETV Bharat / state

ಅವರಿವರ ಅಲೆಯಲ್ಲೇ ಗೆಲ್ಲುತ್ತಿರುವ ಸುರೇಶ್​​ ಅಂಗಡಿ 'ಗಾಳಿಪುತ್ರ': ಸತೀಶ್​​ ಜಾರಕಿಹೊಳಿ ಲೇವಡಿ

2005ರ ಚುನಾವಣೆಯಲ್ಲಿ ವಾಜಪೇಯಿ ಅಲೆಯಲ್ಲಿ, 2009ರಲ್ಲಿ ಯಡಿಯೂರಪ್ಪ ಅವರ ಅಲೆಯಲ್ಲಿ ಹಾಗೂ 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಅಂಗಡಿ ಗೆಲುವು ದಾಖಲಿಸಿದ್ದಾರೆ. ಮೂರು ಬಾರಿಯ ಅವರ ಗೆಲುವು ಸ್ವಂತ ಸಾಮರ್ಥ್ಯದ ಗೆಲುವಲ್ಲ ಎಂದು ಸತೀಶ್ ಜಾರಕಿಹೊಳಿ, ಸುರೇಶ್ ಅಂಗಡಿ ಕಾಲೆಳೆದರು.

ಸತೀಶ್ ಜಾರಕಿಹೊಳಿ

By

Published : Apr 9, 2019, 5:02 PM IST

ಬೆಳಗಾವಿ: ಕೇವಲ ಅಲೆಗಳಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆಲುವು ದಾಖಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರಿಗೆ ಗಾಳಿಪುತ್ರ ಎಂದು ಹೆಸರಿಟ್ಟಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005ರ ಚುನಾವಣೆಯಲ್ಲಿ ವಾಜಪೇಯಿ ಅಲೆಯಲ್ಲಿ, 2009ರಲ್ಲಿ ಯಡಿಯೂರಪ್ಪ ಅವರ ಅಲೆಯಲ್ಲಿ ಹಾಗೂ 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಅಂಗಡಿ ಗೆಲುವು ದಾಖಲಿಸಿದ್ದಾರೆ. ಮೂರು ಬಾರಿಯ ಅವರ ಗೆಲುವು ಸ್ವಂತ ಸಾಮರ್ಥ್ಯದ ಮೇಲಲ್ಲ ಎಂದು ಕಾಲೆಳೆದರು.

ಸತೀಶ್ ಜಾರಕಿಹೊಳಿ

ದೇಶದಲ್ಲಿ ಈ ಸಲ ರಾಹುಲ್ ಗಾಂಧಿ ಅಲೆ ಇದೆ. ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ. ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳಿಗೆ ಈ ಸಲ ಮುಖಭಂಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಅಭ್ಯರ್ಥಿಗಳ ಸ್ಪರ್ಧೆಗೆ ಮುಂದಾಗಿದ್ದಾರೆ ಎಂಬ ಸುರೇಶ್ ಅಂಗಡಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎಂಇಎಸ್ ಮೊದಲಿನಿಂದಲೂ ಬಿಜೆಪಿ ಪರ ಇದೆ. ಬಿಜೆಪಿ ಮಾತನ್ನೇ ಮರಾಠಿ ಭಾಷಿಕರು ಕೇಳುತ್ತಾರೆ. ಎಂಇಎಸ್ ಸ್ವತಂತ್ರವಾಗಿದ್ದು, ಅವರೇ ಸ್ಪರ್ಧೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details