ಅಥಣಿ:ರಾಜ್ಯದಾದ್ಯಂತ ಸಾರಿಗೆ ನೌಕರರು 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಕ್ಷೇತ್ರದಲ್ಲಿ ಅಥಣಿಯಿಂದ ಜಮಖಂಡಿಯತ್ತ ಹೋಗುತ್ತಿದ್ದ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿರುವ ಆರೋಪ ಕೇಳಿಬಂದಿದೆ.
ಸಾರಿಗೆ ಸಚಿವ ಸವದಿ ತವರು ಕ್ಷೇತ್ರದಲ್ಲಿ ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲು ತೂರಾಟ
ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದ ಅಥಣಿಯಲ್ಲಿ ಕೆಲವು ಬಸ್ ಸಂಚಾರ ಪುನರಾರಂಭ ಮಾಡಲಾಗಿತ್ತು. ಆದರೆ ಅಥಣಿಯಿಂದ ಜಮಖಂಡಿಗೆ ಎರಡನೆ ಪಾಳೆ ಹೋಗುವ ಸಂದರ್ಭದಲ್ಲಿ ಸರ್ಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BUS
ಅಥಣಿಯಿಂದ ಜಮಖಂಡಿ ಮಾರ್ಗವಾಗಿ ಸತ್ತಿ ಗ್ರಾಮ ಸಮೀಪದಲ್ಲಿ ಸಾರಿಗೆ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಅವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಅಥಣಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಕ್ಷೇತ್ರದ ಅಥಣಿಯಲ್ಲಿ ಕೆಲವು ಬಸ್ ಸಂಚಾರ ಪುನರಾರಂಭ ಮಾಡಲಾಗಿತ್ತು. ಆದರೆ ಅಥಣಿಯಿಂದ ಜಮಖಂಡಿಗೆ ಎರಡನೆ ಪಾಳೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಥಣಿ ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.