ಬೆಳಗಾವಿ: ಜನಾರ್ದನ ರೆಡ್ಡಿ ಅವರು ನಿನ್ನೆ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರು ಬಹಳ ಬುದ್ಧಿವಂತರಾಗಿದ್ದಾರೆ. ತಿಳಿವಳಿಕೆ ಮತ್ತು ಅನುಭವ ಹೊಂದಿರುವ ವ್ಯಕ್ತಿ ಆಗಿದ್ದರಿಂದ ಅವರೇನು ಹೊಸ ಪಕ್ಷವನ್ನು ನಿರ್ಮಾಣ ಮಾಡಿದ್ದಾರೋ, ನಾನು ಅವರು ಬಾಲ್ಯ ಸ್ನೇಹಿತನಾಗಿ ಅವರಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಸುವರ್ಣಸೌಧ ಆವರಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ರಾಮುಲು, ಜನಾರ್ದನ ರೆಡ್ಡಿ ಅವರ ವಿಚಾರವಾಗಿ ನಾನು ಮುಖ್ಯಮಂತ್ರಿ ಹಾಗೂ ವರಿಷ್ಠರ ಜೊತೆ ಮಾತನಾಡಿದ್ದೆ. ಅವಕಾಶ ಸಿಕ್ಕರೆ ಇವತ್ತು ಮುಖ್ಯಮಂತ್ರಿ ಅವರ ಜೊತೆ ಮಾತನಾಡುತ್ತೇನೆ. ಜನಾರ್ದನ ರೆಡ್ಡಿ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ನಾನು ಅವರು ಬಾಲ್ಯ ಸ್ನೇಹಿತನಾಗಿ ಅವರಿಗೆ ಒಳ್ಳೆದಾಗಲಿ ಎಂದು ಬಯಸುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ನಾನು ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಕಾಂಗ್ರೆಸ್ ಮುಕ್ತ ಮಾಡಲು ನಾವು ಸಂಕಲ್ಪವನ್ನು ಮಾಡಿದ್ದೇವೆ. ನಮ್ಮ ಪಕ್ಷ ಬೇರೆ, ಅವರ ಪಕ್ಷ ಬೇರೆ ಅವರ ಪಕ್ಷದ ವಿಚಾರವಾಗಿ ನಾನು ಇಲ್ಲಿ ವಾದ ಮಾಡುವುದಕ್ಕೆ ಹೋಗುದಿಲ್ಲ ಎಂದು ಹೇಳಿದರು.
ನಮ್ಮ ಪಾರ್ಟಿ ಕಲ್ಯಾಣ ಕರ್ನಾಟದಲ್ಲಿ ತುಂಬಾ ಗಟ್ಟಿಯಾಗಿದೆ, ಇದರಿಂದಾಗಿ ನಮ್ಮ ಪಕ್ಷ ನನಗೆ ದೊಡ್ಡ ಸ್ಥಾನವನ್ನು ನೀಡಿದೆ ಎಂದರು. ಇನ್ನು ತಾವು ಪಕ್ಷ ತೊರೆಯಲ್ಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಇದೇ ವೇಳೆ ಶ್ರೀರಾಮುಲು ಹೇಳಿದರು.
ಇದನ್ನೂ ಓದಿ:ಜನಾರ್ದನ ರೆಡ್ಡಿ ಹೊಸ ಪಕ್ಷ ರಚನೆ: ಸಿ ಟಿ ರವಿ, ರೇಣುಕಾಚಾರ್ಯ ಹೇಳಿದ್ದೇನು?