ಬೆಳಗಾವಿ:ಇಲ್ಲಿನ 3ನೇ ಬಸ್ ಡಿಪೋದ ಬಂಕ್ನಿಂದ ಸ್ವಂತ ಕಾರಿಗೆ ಡೀಸೆಲ್ ಹಾಕಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕಾರು ಚಾಲಕನ ಮೇಲೆ ಕ್ರಮ ಜರುಗಿಸದೇ ಡಿಸಿಎಂ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರನ ಮೇಲೆ ಕ್ರಮ ಜರುಗಿಸಿದ್ದಾರೆ.
ಡಿಸಿಎಂ ಲಕ್ಷ್ಮಣ ಸವದಿ ಅವರ ಈ ಕ್ರಮ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತಿದೆ. ಬೆಳಗಾವಿಯ 3ನೇ ಘಟಕದ ಕಿರಿಯ ಸಹಾಯಕ ಬಿ.ಎಸ್. ಕಿಶೋರ್ಗೆ ಸಾರಿಗೆ ಹಿರಿಯ ಅಧಿಕಾರಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ನಿನ್ನೆ ಬಸ್ ಡಿಪೋದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸ್ವಂತ ಕೆಎ 03 ಎನ್.ಎಫ್ 8989 ಕಾರಿಗೆ ನಿಯಮ ಉಲ್ಲಂಘಿಸಿ 44 ಲೀಟರ್ ಇಂಧನ ಹಾಕಲಾಗಿತ್ತು.