ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ ನಡೆಗೆ ಸಹೋದರ ಸತೀಶ್ ಅಸಮಾಧಾನ - ಸತೀಶ್ ಜಾರಕಿಹೊಳಿ

ಯಾರ ಕೈಗೂ ಸಿಗದೆ, ಪಕ್ಷದ ಪರ ಪ್ರಚಾರಕ್ಕೂ ಬರದೆ ಇರುವ ರಮೇಶ್ ಜಾರಕಿಹೊಳಿ ನಡೆಗೆ ಸಹೋದರ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ

By

Published : Apr 8, 2019, 1:50 PM IST

ಬೆಳಗಾವಿ: ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಮುನಿಸು ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಸಹೋದರ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಕೂಡ ತಮ್ಮ ಅಸಮಾಧಾನ ಹೊರ ಹಾಕಿದ್ದು, ಯಾರ ಕೈಗೂ ಸಿಗದಂತೆ ರಮೇಶ್ ಅವರು ಇದ್ದಾರೆ. ಪಕ್ಷದ ಪರ ಪ್ರಚಾರಕ್ಕೆ ಬರದೆ ತಮಗೆ ಸಂಬಂಧವೇ ಇಲ್ಲದಂತೆ ರಮೇಶ್ ವರ್ತಿಸುತ್ತಿದ್ದಾರೆ ಎಂದರು.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅವರನ್ನು ಪ್ರಚಾರಕ್ಕೆ ತರುವಂತೆ ಪಕ್ಷದ ಹಲವು ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರು ಮಾತ್ರ ಚುನಾವಣೆ ಪ್ರಚಾರಕ್ಕೂ ತನಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಲಖನ್ ಭೇಟಿಯಾಗಿ ಸತೀಶ್ ಪ್ರಚಾರಕ್ಕೆ ಕರೆದಿದ್ದರು. ಆದರೂ ಪ್ರಚಾರಕ್ಕೆ ಬಂದಿರಲಿಲ್ಲ. ಒಟ್ಟಿನಲ್ಲಿ ಸಹೋದರನ ರಾಜಕೀಯ ಮುನಿಸು ಸತೀಶ್ ಜಾರಕಿಹೊಳಿಗೆ ತಲೆನೋವಾಗಿದೆ.

ಎಷ್ಟೇ ಪ್ರಯತ್ನಪಟ್ಟರೂ ತಣ್ಣಗಾಗದ ಅಸಮಾಧಾನ:

ಬೆಳಗಾವಿ ರಾಜಕೀಯ ಒಂದು ರೀತಿಯಲ್ಲಿ ವಿಭಿನ್ನ. ಪಕ್ಷ ರಾಜಕೀಯಕ್ಕಿಂತ ವ್ಯಕ್ತಿ ರಾಜಕೀಯಕ್ಕೆ ಹೆಚ್ಚಿನ ಮಹತ್ವ. ಸಚಿವ ಸ್ಥಾನ ಕೈತಪ್ಪಿದ ದಿನದಿಂದ ಕಾಂಗ್ರೆಸ್ ಮುಖಂಡರ ಮೇಲೆ ಮುನಿಸಿಕೊಂಡಿರುವ ರಮೇಶ್ ಅವರ ನಡೆಯಿಂದ ಚುನಾವಣೆಯಲ್ಲಿ ‌ಭಾರಿ ಹಿನ್ನಡೆ ಆಗುವ ಲಕ್ಷಣ ಗೋಚರಿಸುತ್ತಿದೆ. ಒಟ್ಟಿನಲ್ಲಿ ಸಹೋದರನ ಅಸಮಾಧಾನದಿಂದ ಸಚಿವರಿಗೆ ಮಾತ್ರ ತನಲೆನೋವಾಗಿದ್ದಂತು ಸತ್ಯ.

ABOUT THE AUTHOR

...view details