ಕರ್ನಾಟಕ

karnataka

ETV Bharat / state

ಬೆಳಗಾವಿ: ಮಳೆಗೆ ಗ್ರಾಮ ಜಲಾವೃತ... ಆಸ್ಪತ್ರೆಗೆ ಹೋಗಲಾಗದೆ ಮನೆಯಲ್ಲೇ ಗರ್ಭಿಣಿ ಗೋಳಾಟ

ಧಾರಾಕಾರ ಮಳೆಗೆ ಜನಜೀವನ ತತ್ತರಿಸಿದೆ. ಖಾನಾಪುರ ತಾಲೂಕಿನ ಗ್ರಾಮ ಜಲಾವೃತವಾದ ಹಿನ್ನೆಲೆ ರಸ್ತೆ ಸಂಚಾರ ಬಂದ್ ಆಗಿದ್ದು, ಹೆರಿಗೆ ನೋವಿನಿಂದ ಬಳಲುತ್ತಿರುವ ಗರ್ಭಿಣಿ ಆಸ್ಪತ್ರೆಗೆ ಹೋಗಲಾಗದೇ ಮನೆಯಲ್ಲೇ ಸಂಕಟ ಪಟುತ್ತಿದ್ದಾಳೆ.

rain
rain

By

Published : Jul 24, 2021, 2:02 AM IST

ಬೆಳಗಾವಿ:ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಖಾನಾಪುರದ ಅಶೋಕನಗರ ಗ್ರಾಮ ಮುಳುಗಡೆ ಆಗಿದ್ದು, ಜನರು ತತ್ತರಿಸಿದ್ದಾರೆ.


ಮಲಪ್ರಭಾ ನದಿನೀರು ಆವರಿಸಿರುವ ಕಾರಣ ಅಶೋಕ ನಗರ ಗ್ರಾಮ ನಡುಗಡ್ಡೆಯಾಗಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಹೀಗಾಗಿ ಗ್ರಾಮದ ಗರ್ಭಿಣಿ ಹೆರಿಗೆಗೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದಾರೆ.

ಹೆರಿಗೆ ನೋವಿನಿಂದ ಅಶೋಕ ನಗರ ಗ್ರಾಮದ ಮನೆಯಲ್ಲೇ ಗರ್ಭಿಣಿ ಮಾಯಕ್ಕ ಪೂಜೇರಿ ಸಂಕಟ ಪಡುತ್ತಿದ್ದಾರೆ. ಹೇಗಾದರೂ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡುವಂತೆ ಕುಟುಂಬಸ್ಥರು ‌ಕೋರುತ್ತಿದ್ದಾರೆ.

ಅಶೋಕ ನಗರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲವೂ ಜಲಾವೃತಗೊಂಡಿವೆ. ಅಶೋಕ ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ವೈದ್ಯರು, ಸ್ಟಾಫ್ ನರ್ಸ್ ಇಲ್ಲ. ಖಾನಾಪುರದ ವೈದ್ಯರೇ ಅಶೋಕ ನಗರ ಪಿಹೆಚ್‌ಸಿಗೆ ಬಂದು ಹೋಗುತ್ತಿದ್ದರು.
(ಛೋರ್ಲಾ ಬಳಿ ಭೂಕುಸಿತ: ಕರ್ನಾಟಕ - ಗೋವಾ ಸಂಪರ್ಕ ಸ್ಥಗಿತ)

ABOUT THE AUTHOR

...view details