ಕರ್ನಾಟಕ

karnataka

ETV Bharat / state

ಮೈಸೂರು ಝೂ ಮಾದರಿಯಲ್ಲೇ ರಾಣಿ ಚೆನ್ನಮ್ಮ ಮೃಗಾಲಯ ಅಭಿವೃದ್ಧಿ: ಸತೀಶ್ ಜಾರಕಿಹೊಳಿ - ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಭರವಸೆ

ಅರಣ್ಯ ಇಲಾಖೆಯಿಂದ ಈಗಾಗಲೇ ಸುಸಜ್ಜಿತ ಮೃಗಾಲಯದ ಇತರೇ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಇದರಿಂದ ಜಿಲ್ಲೆಗೆ ಹೊಸ ಕಾಂತಿ ಮೂಡಲಿದೆ..

Rani Chennamma Zoo
ಸತೀಶ್ ಜಾರಕಿಹೊಳಿ

By

Published : Jan 31, 2021, 5:15 PM IST

Updated : Jan 31, 2021, 6:32 PM IST

ಬೆಳಗಾವಿ :ಮೈಸೂರು ಮೃಗಾಲಯ ಮಾದರಿ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚೆನ್ನಮ್ಮ ಮೃಗಾಲಯವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಓದಿ: ತ್ರಿವರ್ಣ ಧ್ವಜ ವಿಚಾರದಲ್ಲಿ ಪ್ರಧಾನಿ ಮೊಸಳೆ ಕಣ್ಣೀರು: ದಿಗ್ವಿಜಯ್ ಸಿಂಗ್

ನಗರದಲ್ಲಿ ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿತ್ತೂರ ರಾಣಿ ಚೆನ್ನಮ್ಮ ಮೃಗಾಲಯ ಅಭಿವೃದ್ಧಿಗೊಳಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ.

ಈಗಾಗಲೇ ಇಲ್ಲಿ ವನ್ಯಜೀವಿಗಳು ಬರಬೇಕಿತ್ತು. ಆದರೆ, ಕೊವೀಡ್ ಹಿನ್ನೆಲೆ ವಿಳಂಬವಾಗಿದೆ. ಈ ಯೋಜನೆಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಮೃಗಾಲಯಕ್ಕೆ ಹುಲಿ ಸಫಾರಿ, ಸಿಂಹ, ಚಿರತೆ, ಕರಡಿ, ಜಿರಾಫೆಗಳು ಸೇರಿ ಮತ್ತಿತರ ವನ್ಯಜೀವಿಗಳು ಸೇರ್ಪಡೆಯಾಗಲಿವೆ.

ಮೃಗಾಲಯದ ಅತ್ಯವಶ್ಯಕವಾದ ನೀರಿಗಾಗಿ ಕೆರೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಈ ಮೃಗಾಲಯಕ್ಕೆ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜನ ಸಮುದಾಯದಲ್ಲಿ ವನ್ಯಪ್ರಾಣಿ, ಪಕ್ಷಿಗಳ ಮತ್ತು ವನ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯ.

ಅರಣ್ಯ ಇಲಾಖೆಯಿಂದ ಈಗಾಗಲೇ ಸುಸಜ್ಜಿತ ಮೃಗಾಲಯದ ಇತರೇ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಇದರಿಂದ ಜಿಲ್ಲೆಗೆ ಹೊಸ ಕಾಂತಿ ಮೂಡಲಿದೆ.

ಜೊತೆಗೆ ಪ್ರವಾಸಿಗರ ಸಂಖ್ಯೆ ಇಮ್ಮಡಿಗೊಳ್ಳುವುದಲ್ಲದೆ ಜಿಲ್ಲಾ ಪ್ರವಾಸೋದ್ಯಮ ಗಟ್ಟಿಗೊಳಿಸಬಹುದಾಗಿದೆ. ಈ ಮೃಗಾಲಯಕ್ಕೆ ಕೊರತೆ ಇರುವ ಅವಶ್ಯಕ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

Last Updated : Jan 31, 2021, 6:32 PM IST

ABOUT THE AUTHOR

...view details