ಬೆಳಗಾವಿ: ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ತೀವ್ರವಾಗಿ ನೊಂದಿರುವ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅಸ್ವಸ್ಥರಾಗಿರುವ ರಮೇಶ ಕತ್ತಿ ಅವರನ್ನು ಕೊಠಡಿಯೊಂದರಲ್ಲಿ ಇಸಿಜಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಉಮೇಶ ಕತ್ತಿ ನಿಧನ ಬಳಿಕ ರಮೇಶ ಕತ್ತಿ ನಿನ್ನೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಇಂದು ಬೆಳಗ್ಗೆ ಅಣ್ಣನ ಪಾರ್ಥಿವ ಶರೀರದ ಜೊತೆ ಆಗಮಿಸಿದ್ದರು. ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್ನಲ್ಲಿ ಅಂತಿಮ ದರ್ಶನದ ವೇಳೆ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ಅಣ್ಣನ ಸಾವಿನ ಬಳಿಕ ನೊಂದಿರುವ ರಮೇಶ ಕತ್ತಿ, ನಿನ್ನೆಯಿಂದಲೂ ಕಣ್ಣೀರು ಹಾಕುತ್ತಲೇ ಇದ್ದಾರೆ. ರಮೇಶ ಕತ್ತಿ ಮಾಜಿ ಸಂಸದ ಹಾಗೂ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.