ಬೆಳಗಾವಿ: ಗ್ರಾಮೀಣ ಶಾಸಕಿಯನ್ನ ಈ ಚುನಾವಣೆಯಲ್ಲಿ ಸೋಲಿಸಬೇಕು. ಇಲ್ಲವಾದರೆ ನಿಮ್ಮ ಜಮೀನು, ಮನೆ ಹೋಗ್ತವೆ. ಶಾಸಕರ ಸಂಬಂಧಿಕರೇ ಮೊದಲು ನಿಮ್ಮ ಜಮೀನು ಮಾರಬೇಕಾಗುತ್ತದೆ. ಈ ಚುನಾವಣೆ ಬಹಳ ಮುಖ್ಯವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ(ಗುರುವಾರ) ಬೆಳಗಾವಿ ಗ್ರಾಮೀಣ ಹೀರೆ ಬಾಗೇವಾಡಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಅವರ ಅಭಿಮಾನಿಗಳ ಬಳಗದಿಂದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅವರು ಎನ್ನು ಮಾಡುತ್ತಾರೆ ಅದಕ್ಕೆ ನಾವು ಗಟ್ಟಿ ಇದ್ದೇವೆ. ಅವರು ಎನು ಕೊಡುತ್ತಾರೋ ಅದರ 2 ಪಟ್ಟು ಕೊಡಲು ತಯಾರಿಗೆದ್ದೇವೆ. ಇಲ್ಲಿ ನಿಮ್ಮ ಜಾತಿವರು ಎಂದು ಹೇಳುತ್ತಾರೆ. ಪಶ್ಚಿಮದ ಕಡೆ ಹೋಗಿ ನಿಮ್ಮ ಮಗಳು ಎನ್ನುತ್ತಾರೆ. ಬಹಳ ಕಲಾಕಾರ ಇದ್ದಾರೆ ಅವರು. ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದರೆ ನೀವು ಗಟ್ಟಿಯಾಗಿ ಚುನಾವಣೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ 4 ವರ್ಷದಿಂದ ಸಂಘಟನೆ ಕುಂಠಿತವಾಗಿತ್ತು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದು ಅಭಿವೃದ್ಧಿ ಮಾಡುತ್ತೇವೆ ಎಂದ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ನೀರಾವರಿ ಇಲಾಖೆಯಲ್ಲಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಕೆರೆ ಕಟ್ಟುವುದರಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಮಾಡುತ್ತಿದ್ದರೂ, ಆ ಗೋಲ್ ಮಾಲ್ನಲ್ಲಿ ನೂರಾರು ಕೋಟಿ ರೂ.ತಿಂದು ಮುಚ್ಚಲು ಯತ್ನಿಸಿದರು. ಈ ವಿಚಾರದಿಂದ ನಾನು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಗ್ರಾಮೀಣ ಕ್ಷೇತ್ರ ಹಾಗೂ ಬೆಳಗಾವಿ ರಾಜಕೀಯವಾಗಿ ನಾವು ತಯಾರು ಮಾಡಿರುವ ಕ್ಷೇತ್ರ. ಆದರೆ ಇಲ್ಲಿನ ಶಾಸಕರು ಎದೆ ತಟ್ಟಿಕೊಂಡು ನಾನೇ ಅಭಿವೃದ್ಧಿ ಮಾಡಿದೆ ಎಂದು ಹೇಳುತ್ತಾರೆ. ಬಿಜೆಪಿ ಸರ್ಕಾರ ಇದೆ. ಅವರು ಅನುದಾನ ಕೊಟ್ಟಿದ್ದಾರೆ. ಆದರೆ ಇವರು ಸುಳ್ಳು ಹೇಳುತ್ತಾ ಕಮಿಷನ್ ಬೆನ್ನು ಬಿದ್ದಿದ್ದಾರೆ ಎಂದು ಸ್ಥ ಆಕ್ರೋಶ ವ್ಯಕ್ತಪಡಿಸಿದರು.