ಬೆಳಗಾವಿ :ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ರಾಜಕೀಯ ವಿರೋಧಿಗಳ ಜತೆಗೆ ಕಾಂಗ್ರೆಸ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಗೌಪ್ಯ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ್ಮನ ರಾಜಕೀಯ ವಿರೋಧಿಗಳ ಜೊತೆ ರಮೇಶ್ ಜಾರಕಿಹೊಳಿ ಗೌಪ್ಯ ಸಭೆ!
ಶತ್ರುವಿನ ಶತ್ರು ಮಿತ್ರ ಎಂಬಂತಿದೆ ಶಾಸಕ ರಮೇಶ್ ಜಾರಕಿಹೊಳಿ ನಡೆ. ರಾಜಕೀಯವಾಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಗುಡುಗುತ್ತಿರುವ ರಮೇಶ್ ಅವರು ಯಮಕನಮರಡಿ ಕ್ಷೇತ್ರದ ಉದ್ಯಮಿಗಳಾದ ಬಿ.ಬಿ. ಹಂಜಿ ಹಾಗೂ ರವಿ ಹಂಜಿ ಅವರ ಜತೆಗೆ ಗೌಪ್ಯ ಸಭೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಗೌಪ್ಯ ಸಭೆ
ನಗರದ ಖಾಸಗಿ ಹೋಟೆಲ್ನಲ್ಲಿ ಅರ್ಧಗಂಟೆ ಸಭೆ ನಡೆಸುವ ಮೂಲಕ ರಮೇಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅದೇ ಕ್ಷೇತ್ರದ ಉದ್ಯಮಿಗಳಾದ ಬಿ.ಬಿ. ಹಂಜಿ ಹಾಗೂ ರವಿ ಹಂಜಿ ಅವರ ಜತೆಗೆ ರಮೇಶ್ ಗೌಪ್ಯ ಸಭೆ ನಡೆಸಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಹಂಜಿ ಕುಟುಂಬ ಸದಸ್ಯರ ಜತೆಗೆ ಸಭೆ ನಡೆಸಿ ಹೋಟೆಲ್ನಿಂದರಮೇಶ್ ಜಾರಕಿಹೊಳಿನೇರವಾಗಿ ಗೋಕಾಕ್ಗೆ ತೆರಳಿದರು. ಈ ವೇಳೆ ಅವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡರು.
Last Updated : May 10, 2019, 4:56 PM IST