ಬೆಳಗಾವಿ: ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಶ್ರೀಪಾದಬೋಧ ಸ್ವಾಮೀಜಿಯವರ ನಿಧನಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಸಿದ್ಧಸಂಸ್ಥಾನ ಮಠದ ಮಹಾಸ್ವಾಮೀಜಿ ಶ್ರೀಪಾದ ಬೋಧ ಮಹಾಸ್ವಾಮಿಗಳ ಲಿಂಗೈಕ್ಯರಾದ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ.
ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಶ್ರೀ ಪಾದಬೋಧ ಸ್ವಾಮೀಜಿ ಇನ್ನಿಲ್ಲ
ನಮ್ಮ ಭಾಗದ ನಡೆದಾಡುವ ದೇವರು ಎಂದೇ ಕರೆಯಲ್ಪಡುತ್ತಿದ್ದ ಸ್ವಾಮೀಜಿಯವರು, ಹಲವು ಪರಿಸ್ಥಿತಿಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದರು. ಮೂಡಲಗಿ ತಾಲೂಕು ರಚನೆ ಸೇರಿದಂತೆ ಎಲ್ಲ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು, ಹಲವಾರು ವರ್ಷಗಳಿಂದ ಅಪಾರ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಸದ್ಭಕ್ತರಿಗೆಲ್ಲಾ ಅವರ ಆಶೀರ್ವಾದ ದೊರೆಯಲಿ ಎಂದಿದ್ದಾರೆ.