ಚಿಕ್ಕೋಡಿ: ತರಾತುರಿಯಲ್ಲಿ ಮಾಡಿದ ಲಾಕ್ಡೌನ್ನಿಂದ ತುಂಬಾ ತೊಂದರೆಯಾಗಿದೆ. ಲಾಕ್ಡೌನ್ ಮುಂಚೆ ಸಿಎಂಗಳ ಜೊತೆ ಚರ್ಚೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದರು.
ತರಾತುರಿಯಲ್ಲಿ ಮಾಡಿದ ಲಾಕ್ಡೌನ್ನಿಂದ ಸಮಸ್ಯೆಯಾಗಿದೆ: ಸತೀಶ್ ಜಾರಕಿಹೋಳಿ
ಕೊರೊನಾ ಹಿನ್ನೆಲೆ ಗೋಕಾಕ್ ತಾಲೂಕಿನ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ, ಅಲ್ಲಿನ ಕುಂದು-ಕೊರತೆಗಳನ್ನು ವಿಚಾರಿಸಿದರು.
ಸತೀಶ್ ಜಾರಕಿಹೋಳಿ
ಗೋಕಾಕ್ ತಾಲೂಕಿನ ಕೊಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ, ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿದರು. ನಂತರ ಮಾತನಾಡಿದ ಅವರು, ಕೊರಾನಾ ತಡೆಗಟ್ಟಲು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅನೂಕೂಲವಾಗುಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದರು.
ಮೊದಲೇ ತಯಾರಿ ಮಾಡಿಕೊಂಡು ಲಾಕ್ಡೌನ್ ಮಾಡಬೇಕಿತ್ತು. ತುಂಬಾ ಗಡಬಿಡಿಯಲ್ಲಿ ಲಾಕ್ಡೌನ್ ಮಾಡಿದ್ದಾರೆ. ಸಿಎಂಗಳ ಸಲಹೆ ಕೇಳಬೇಕಿತ್ತು. ತರಾತುರಿಯಲ್ಲಿ ಲಾಕ್ಡೌನ್ ಮಾಡಿದ್ದರಿಂದ ಇಷ್ಟೆಲ್ಲಾ ತೊಂದರೆಯಾಗಿದೆ ಎಂದು ಹೇಳಿದರು.