ಬೆಳಗಾವಿ:ಮಹಾನಗರ ಪಾಲಿಕೆ ಮುಂಭಾಗ ಕನ್ನಡ ಧ್ವಜಸ್ತಂಭ ಸ್ಥಾಪನೆ ವಿಚಾರವಾಗಿ ಪೊಲೀಸರು ಕನ್ನಡ ಧ್ವಜ ತೆರವು ಮಾಡುತ್ತಾರೆಂಬ ಆತಂಕ ಹಿನ್ನೆಲೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಕೊರೆಯುವ ಚಳಿಯಲ್ಲಿಯೇ ಅಹೋರಾತ್ರಿ ಕನ್ನಡ ಧ್ವಜಸ್ತಂಭವನ್ನು ಕಾಯುತ್ತಿದ್ದಾರೆ.
ಪಾಲಿಕೆ ಎದುರು ಇಂದು ಸ್ಥಾಪಿಸಲಾಗಿದ್ದ ಧ್ವಜಸ್ತಂಭವನ್ನು ಮಧ್ಯರಾತ್ರಿ ಪೊಲೀಸರು ತೆರವು ಮಾಡಬಹುದೆಂಬ ಆತಂಕದಲ್ಲಿರುವ ಕನ್ನಡಪರ ಹೋರಾಟಗಾರರು ಅಹೋರಾತ್ರಿವರೆಗೂ ಪಾಲಿಕೆ ಕಚೇರಿ ಮುಂಭಾಗದಲ್ಲಿ ಕಾಯುತ್ತಾ ಕುಳಿತುಕೊಂಡಿದ್ದಾರೆ.
ಕನ್ನಡ ಧ್ವಜ ಕಾಯುತ್ತಿರುವ ಕಾರ್ಯಕರ್ತರು ಆದರೆ ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಧ್ವಜಸ್ತಂಭ ತೆರವು ಮಾಡೋದಿಲ್ಲ ಎಂದು ಕನ್ನಡಪರ ಹೋರಾಟಗಾರರಿಗೆ ಭರವಸೆ ನೀಡಿದರೂ ಹೋರಾಟಗಾರರು ಕಾಯುತ್ತಾ ಕುಳಿತಿದ್ದು, ಅಹೋರಾತ್ರಿ ಕಾಯಲು ನಿರ್ಧಾರಿಸಿದ್ದಾರೆ. ಈ ವೇಳೆ ಕೆಲ ಕನ್ನಡಾಭಿಮಾನಿಗಳು ಕನ್ನಡಪರ ಕಾರ್ಯಕರ್ತರಿಗೆ ಸಿಹಿ ಹಂಚಿ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡಿದರು.
ಕನ್ನಡಪರ ಸಂಘಟನೆ ಕಾರ್ಯಕರ್ತರಿಗೆ ಹಣ್ಣು ನೀಡಿದ ಸಾರ್ವಜನಿಕರು ಕೆಲ ಕನ್ನಡಪರ ಕಾರ್ಯಕರ್ತರು ನಿದ್ದೆಗೆ ಜಾರಿದ್ದರೆ, ಇನ್ನೂ ಕೆಲವರು ಧ್ವಜ ಕಾಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸ್ಥಳದಿಂದ ತೆರಳಿದ್ದು, ಸ್ಥಳದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ ಮತ್ತು ಮಾರ್ಕೆಟ್ ಠಾಣೆ ಪೊಲೀಸರು ಹಾಜರಿದ್ದಾರೆ.
ಇದನ್ನೂ ಓದಿ:ಕನ್ನಡಪರ ಹೋರಾಟಗಾರರೊಂದಿಗೆ ಬೆಳಗಾವಿ ಪಾಲಿಕೆ ಆಯುಕ್ತರ ಮೊತ್ತೊಂದು ಸುತ್ತಿನ ಸಂಧಾನ ವಿಫಲ