ಬೆಳಗಾವಿ: ನಗರದ ಕಾಂಗ್ರೆಸ್ ಭವನಲ್ಲಿ ಇಂದು ಸಂಜೆ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಭೆಯಿಂದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ಅರ್ಧಕ್ಕೆ ಹೊರ ನಡೆದಿದ್ದಾರೆ.
ಬೆಳಗಾವಿ ಲೋಕಸಭೆ ಉಪಚುನಾವಣೆ ಗೆಲ್ಲಲು ಚುನಾವಣಾ ತಂತ್ರಗಳನ್ನು ಹೆಣೆಯುವ ಉದ್ದೇಶದಿಂದ ಇಂದು ಹಿರಿಯ ಕಾಂಗ್ರೆಸ್ ಮುಂಖಡರು, ಮಾಜಿ ಶಾಸಕರು ಹಾಗೂ ಸ್ಥಳೀಯ ನಾಯಕರೊಂದಿಗೆ ಚರ್ಚಿಸಲು ಡಿಕೆಶಿ ಸಭೆ ನಡೆಸುತ್ತಿದ್ದರು.
ಸಭೆಗೆ ಆಗಮಿಸಿದ ಪ್ರಕಾಶ್ ಹುಕ್ಕೇರಿ ಮಧ್ಯದಲ್ಲೇ ಸಭೆಯಿಂದ ಹೊರ ಹೋದರು.
ಕಾಂಗ್ರೆಸ್ ಸಭೆಯಿಂದ ಹೊರನಡೆದ ಪ್ರಕಾಶ ಹುಕ್ಕೇರಿ ಈ ಮೊದಲು ದಿ. ಸುರೇಶ ಅಂಗಡಿ ಕುಟುಂಬಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಬಳಿಕ ಬೆಳಗಾವಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು.
ಆದ್ರೆ, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದ ಪ್ರಕಾಶ ಹುಕ್ಕೇರಿ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಿಲ್ಲ ಎಂಬ ಅಸಮಾಧಾನದಿಂದಲೇ ಇಂದಿನ ಸಭೆಯಲ್ಲಿ ಅರ್ಧಕ್ಕೆ ಹೊರ ನಡೆದಿದ್ದಾರೆ.
ಇದನ್ನೂ ಓದಿ:ಬೆಳಗಾವಿಯ ಸ್ಥಳೀಯ ಕೈ ಮುಖಂಡರ ಜತೆ ಡಿಕೆಶಿ ಸಭೆ : ಉಪ ಚುನಾವಣೆಗೆ ಗೆಲುವಿಗೆ ರಣತಂತ್ರ
ಆದರೆ, ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ತನಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಆಸ್ಪತ್ರೆಗೆ ಹೋಗಬೇಕಿದೆ. ಹೀಗಾಗಿ, ಅರ್ಧಕ್ಕೆ ಹೋಗುತ್ತಿದ್ದೇನೆ. ನಾನು ಸಿಟ್ಟು ಮಾಡಿಕೊಂಡು ಹೊರಗೆ ಬಂದಿಲ್ಲ. ಸತೀಶ್ ಜಾರಕಿಹೊಳಿ ಪರ ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದರು.