ಚಿಕ್ಕೋಡಿ:ಪ್ಲಾಸ್ಟಿಕ್ ಸಾಮಗ್ರಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ದ್ವಿಚಕ್ರ ವಾಹನ ಹಾಗೂ 25,000 ರೂ. ಮೌಲ್ಯದ ಕೆಮಿಕಲ್ ಮಿಶ್ರಿತ ಪ್ಲಾಸ್ಟಿಕ್‌ನ ಅಂಗಡಿಗಳಿಗೆ ಸಾಗಾಟ ಮಾಡುತ್ತಿದ್ದ ವೇಳೆ ನಗರಸಭೆ ಆಯುಕ್ತ ಮಹಾವೀರ ಬೋರನ್ನವರ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿಯಲ್ಲಿ ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ಸೀಜ್..
ಅನಧಿಕೃತವಾಗಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯಿಂದ ದ್ವಿಚಕ್ರ ವಾಹನ ಹಾಗೂ 25,000 ರೂ. ಮೌಲ್ಯದ ಕೆಮಿಕಲ್ ಮಿಶ್ರಿತ ಪ್ಲಾಸ್ಟಿಕ್‌ನ ವಶಪಡಿಸಿಕೊಳ್ಳಲಾಗಿದೆ.
ಚಿಕ್ಕೋಡಿಯಲ್ಲಿ ನಗರಸಭೆ ಆಯುಕ್ತರಿಂದ ಪ್ಲಾಸ್ಟಿಕ್ ವಶ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಮಹಮ್ಮದಲಿ ಅಕ್ಬರ್ ಭಾಗವಾನ್ ಎಂಬ ವ್ಯಕ್ತಿಗೆ ಹಲವಾರು ಬಾರಿ ಪ್ಲಾಸ್ಟಿಕ್ ಮಾರದಂತೆ ಎಚ್ಚರಿಕೆ ನೀಡಿದ್ದರೂ ಕೂಡ ಮಾರಾಟ ಮಾಡುತ್ತಿದ್ದ. ಹಾಗಾಗಿ ಮಾರಾಟದ ವೇಳೆ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಈ ವ್ಯಕ್ತಿ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಗಾಂಧಿ ಮಾರ್ಕೆಟ್ನಿಂದ ಪ್ಲಾಸ್ಟಿಕ್ ಸಾಮಗ್ರಿ ತರುತ್ತಿದ್ದ. ಇದರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದು ನಗರಸಭೆ ಆಯುಕ್ತ ಮಹಾವೀರ ಬೋರನ್ನವರ ಹೇಳಿದರು.
TAGGED:
Chikkodi news