ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೋರ್ವ ಯುವ ವೈದ್ಯೆಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ. ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಕೋವಿಡ್ ವಾರಿಯರ್ಸ್ಗೆ ಮಹಾಮಾರಿ ಕೊರೊನಾ ಬಿಡದಂತೆ ಕಾಡುತ್ತಿದೆ.
ಬೆಳಗಾವಿಯಲ್ಲಿ ಮತ್ತೋರ್ವ ವೈದ್ಯೆಗೆ ಕೊರೊನಾ ಸೋಂಕು ದೃಢ! - 24 ವರ್ಷದ ಯುವ ವೈದ್ಯೆಗೆ ಸೋಂಕು
ಜಿಲ್ಲೆಯ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವ ವೈದ್ಯೆಗೆ ಸೋಂಕು ದೃಢಪಟ್ಟಿದೆ. ಜ್ವರದ ಹಿನ್ನೆಲೆ ವೈದ್ಯೆ ಟೆಸ್ಟ್ ಮಾಡಿಸಿಕೊಂಡಿದ್ದರು. ಈಗ ವರದಿ ಬಂದಿದ್ದು, ವೈದ್ಯೆಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ವೈದ್ಯೆಗೆ ಕೊರೊನಾ

ಈವರೆಗೆ ಬೆಳಗಾವಿ ಜಿಲ್ಲಾಸ್ಪತ್ರೆಯ ಐವರು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ವೈದ್ಯರು, ಓರ್ವ ಸ್ಟಾಫ್ ನರ್ಸ್ ಹಾಗೂ ಇಬ್ಬರು ಟೆಕ್ನಿಷಿಯನ್ಗಳಿಗೆ ಸೋಂಕು ವಕ್ಕರಿಸಿದೆ.