ಕರ್ನಾಟಕ

karnataka

ETV Bharat / state

ಅಥಣಿಯಲ್ಲಿ ಕೊರೊನಾ ಇಲ್ಲ: ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸ್ಪಷ್ಟನೆ

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಮಹಿಳಾ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಆಸ್ಪತ್ರೆಯ ಪೂರ್ವ ಸಿದ್ಧತೆಯ ಡೆಮೋ ವಿಡಿಯೋ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿ.ಎಸ್​.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿ. ಎಸ್. ಪಾಟೀಲ
ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿ. ಎಸ್. ಪಾಟೀಲ

By

Published : Apr 6, 2020, 8:43 PM IST

ಅಥಣಿ: ಕೊರೊನಾ ರೋಗಿಯ ಡೆಮೋ ವಿಡಿಯೋ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಮಹಿಳಾ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರವಾಗಿ ವೈದ್ಯಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನಿಜ ಅಲ್ಲ. ಅದು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಪೂರ್ವ ಸಿದ್ಧತೆಯ ಡೆಮೋ ವಿಡಿಯೋ. ಸಾರ್ವಜನಿಕರು ಅದನ್ನು ತಪ್ಪಾಗಿ ಅರ್ಥೈಸಬಾರದು. ಇಲ್ಲಿಯವರೆಗೂ ಯಾವುದೇ ಕೊರೊನಾ ರೋಗಿ ದಾಖಲಾಗಿಲ್ಲ ಎಂದರು.

ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಸಿ.ಎಸ್.ಪಾಟೀಲ

ಆದ್ದರಿಂದ ಅನಗತ್ಯವಾಗಿ ಜನರು ಭಯ ಪಡಬಾರದು. ವಿಡಿಯೋ ವೈರಲ್ ಮಾಡಿ ಸಮಸ್ಯೆ ಉದ್ಭವಿಸುವಂತೆ ಮತ್ತು ಸಾರ್ವಜನಿಕರಲ್ಲಿ ಭಯ ಮೂಡಿಸಬಾರದು ಎಂದು ಅಥಣಿ ವೈದ್ಯಾಧಿಕಾರಿ ಸಿ.ಎಸ್.ಪಾಟೀಲ ಮನವಿ ಮಾಡಿದ್ದಾರೆ.

ABOUT THE AUTHOR

...view details