ಚಿಕ್ಕೋಡಿ :ಸ್ಮಶಾನ ಭೂಮಿಯಲ್ಲಿಯೇ ಮಗುವಿಗೆ ನಾಮಕರಣ ಮಾಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆಯುವ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮ ಸಾಕ್ಷಿಯಾಯಿತು.
ಮೌಢ್ಯಕ್ಕೆ ಮದ್ದು ಸತೀಶ್ ಜಾರಕಿಹೊಳಿ.. ಸ್ಮಶಾನದಲ್ಲಿಯೇ ಮಗುವಿಗೆ 'ಭೀಮರಾವ್'ನಾಮಕರಣ.. - ಮೊಮ್ಮಗನಿಗೆ ಸ್ಮಶಾನದಲ್ಲಿ ತೊಟ್ಟಿಲು ತೂಗಿ
ಕೃಷ್ಣಾ ನದಿ ತೀರದಿಂದ ಮತ್ತೊಬ್ಬ ಭೀಮರಾವ್ ಹೋರಾಟ ಮಾಡಲಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಬೆಳೆಯಲಿ, ದೇಶದ ಕೊಳೆ ತೊಳೆಯಲಿ..
ಸ್ಮಶಾನ ಭೂಮಿಯಲ್ಲಿಯೇ ಮಗುವಿಗೆ ನಾಮಕರಣ
ಹುನ್ನರಗಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಾಳು ಬರಗಾಲೆ ಎಂಬುವರ ಮೊಮ್ಮಗನಿಗೆ ಸ್ಮಶಾನದಲ್ಲಿ ತೊಟ್ಟಿಲು ತೂಗಿ ಭೀಮರಾವ್ ಎಂದು ನಾಮಕರಣ ಮಾಡಲಾಯಿತು.
ಕೃಷ್ಣಾ ನದಿ ತೀರದಿಂದ ಮತ್ತೊಬ್ಬ ಭೀಮರಾವ್ ಹೋರಾಟ ಮಾಡಲಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಬೆಳೆಯಲಿ, ದೇಶದ ಕೊಳೆ ತೊಳೆಯಲಿ ಎಂದು ಸತೀಶ್ ಜಾರಕಿಹೊಳಿ ಅವರು ಶುಭ ಹಾರೈಸಿದರು.